Friday, March 29, 2024
spot_imgspot_img
spot_imgspot_img

ಮದರಸಾ ಶಾಲೆಯಲ್ಲಿ ಬಾಲಕಿಯ ಅತ್ಯಾಚಾರ: ಜೀವಶಾಸ್ತ್ರ ತರಗತಿಯಲ್ಲಿ ಬಯಲಾಯ್ತು ಗರ್ಭಿಣಿ ಎನ್ನುವ ಅಘಾತಕಾರಿ ವಿಷಯ..!

- Advertisement -G L Acharya panikkar
- Advertisement -

ಕೊಚ್ಚಿ: ಮದರಸಾ ಶಾಲೆಯಲ್ಲಿ 13 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಘಟನೆ ನೆರೆರಾಜ್ಯ ಕೇರಳದಲ್ಲಿ ನಡೆದಿದೆ. ಕೇರಳದ ಥಡಿಯಿಟ್ಟಪರಂಬು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮದರಸಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಪ್ರಸ್ತುತ ಕುಮ್ಮನೊಡೆಯ ಪಟ್ಟಿಮಟ್ಟೊಮ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಶರಫುದ್ದೀನ್​ ಶಾಲೆಗೆ ಬೇಗ ಬರುತ್ತಿದ್ದ ಹುಡುಗಿಯನ್ನು ಪುಸಲಾಯಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಇದೀಗ 2 ತಿಂಗಳ ಗರ್ಭಿಣಿ ಆಗಿದ್ದಾಳೆ. 2021ರ ನವೆಂಬರ್​ನಿಂದ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತೆಯನ್ನು ಮದರಸಾ ತರಗತಿಗೆ ಕರೆದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮದರಸಾದಲ್ಲಿ ಜೀವಶಾಸ್ತ್ರ ಬೋಧಿಸುವ ಶಿಕ್ಷಕರೊಬ್ಬರು ಹೆಣ್ಣುಮಕ್ಕಳ ನಿಯಮಿತ ಋತುಚಕ್ರದ ಬಗ್ಗೆ ಪಾಠ ಮಾಡುವಾಗ ಈ ಘಟನೆ ಬೆಳಕಿಗೆ ಬಂದಿದೆ. ಗರ್ಭಿಣಿಯಾದರೆ ಮುಟ್ಟಾಗುವುದಿಲ್ಲ ಎಂದು ಹೇಳಿದಾಗ ಸಂತ್ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ತನ್ನ ಸ್ನೇಹಿತೆ ಮುಟ್ಟಾಗಿಲ್ಲ ಎಂದು ಹೇಳಿದ್ದಾಳೆ. ತಕ್ಷಣ ಈ ವಿಚಾರವನ್ನು ಶಿಕ್ಷಕ ಮುಖ್ಯೋಪಧ್ಯಾಯರಿಗೆ ತಿಳಿಸಿದ್ದಾರೆ. ಬಳಿಕ ಅವರು ಮಕ್ಕಳ ಸಹಾಯವಾಣಿಗೆ ವಿಷಯ ಮುಟ್ಟಿಸಿದ್ದಾರೆ.

ಸಹಾಯವಾಣಿ ಸಿಬ್ಬಂದಿ ಶಾಲೆಗೆ ಆಗಮಿಸಿ ಸಂತ್ರಸ್ತೆಯ ಕೌನ್ಸೆಲಿಂಗ್​ ನಡೆಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದು, ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಡಿಎನ್‌ಎ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

- Advertisement -

Related news

error: Content is protected !!