ಬಾಲಿವುಡ್ ನಲ್ಲಿ ಹಾಟ್ ಹಾಟ್ ಚಿತ್ರಗಳ ಮೂಲಕ ಪಡ್ಡೆಹುಡುಗರ ಹೃದಯ ಗೆದ್ದಿದ್ದ ಮಲ್ಲಿಕಾ ಶರಾವತ್ ನೀಡಿದ ಹೇಳಿಕೆ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ.
ಸಂದರ್ಶನ ಒಂದರಲ್ಲಿ ನಟಿ ಮಲ್ಲಿಕಾ ಶೆರಾವತ್ ಅವರು ಹಿಂದಿ ಚಿತ್ರರಂಗದ ಕೆಲವು ಕಹಿ ಸತ್ಯಗಳನ್ನು ಬಯಲಿಗೆ ಎಳೆದಿದ್ದಾರೆ. ನಾನು ಲೈಂಗಿಕ ಸಂಧಾನವನ್ನು ನಿರಾಕರಿಸಿದ್ದಕ್ಕೆ ಬಾಲಿವುಡ್ನ ಎ-ಪಟ್ಟಿಯಲ್ಲಿರುವ ಅಥವಾ ಮುಂಚೂಣಿಯಲ್ಲಿದ್ದ ಬಾಲಿವುಡ್ ನಟರು ನನ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದರು.
ನಟರು ತಾವು ನಿಯಂತ್ರಿಸಬಹುದಾದ ಮತ್ತು ಅವರೊಂದಿಗೆ ರಾಜಿ ಮಾಡಿಕೊಳ್ಳುವ ನಟಿಯರನ್ನು ಇಷ್ಟಪಡುತ್ತಾರೆ. ಆದರೆ, ನಾನು ಹಾಗಲ್ಲ, ನನ್ನ ವ್ಯಕ್ತಿತ್ವ ಅದಲ್ಲ. ನಾನು ಯಾರೊಬ್ಬರ ಆಸೆ ಮತ್ತು ಅಭಿಮಾನಗಳಿಗೆ ಒಳಗಾಗಲು ಬಯಸುವುದಿಲ್ಲ ಎಂದರು. ಮುಂಜಾನೆ 3 ಗಂಟೆಗೆ ನಟನೊಬ್ಬ ನಿಮಗೆ ಕರೆ ಮಾಡಿ, ನನ್ನ ಮನೆಗೆ ಬಾ ಎಂದು ಕರೆದರೆ, ಒಂದು ವೇಳೆ ನೀವು ಆ ಚಿತ್ರ ಮಾಡುತ್ತಿದ್ದರೆ ಹೋಗಲೇಬೇಕು. ನೀವೇನಾದರೂ ಹೋಗದಿದ್ದರೆ, ನಿಮ್ಮನ್ನು ಆ ಸಿನಿಮಾದಿಂದಲೇ ಹೊರ ಹಾಕುತ್ತಾರೆಂದು ಮಲ್ಲಿಕಾ ಹೇಳಿದ್ದಾರೆ.