Saturday, April 27, 2024
spot_imgspot_img
spot_imgspot_img

ಮಲ್ಪೆ: ಬಸ್‌ ಮತ್ತು ಬೈಕ್‌ ನಡುವೆ ಅಪಘಾತ; ಗಂಭೀರ ಗಾಯಗೊಂಡ ದಂಪತಿಗಳು ಆಸ್ಪತ್ರೆಗೆ ದಾಖಲು

- Advertisement -G L Acharya panikkar
- Advertisement -

ಮಲ್ಪೆ: ಬಸ್ ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ದಂಪತಿಗಳು ಗಂಭೀರ ಗಾಯಗೊಂಡ ಘಟನೆ ಮಲ್ಪೆ ಸಮೀಪದ ಕಲ್ಮಾಡಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ರಮಾನಂದ (35) ಮತ್ತು ಅವರ ಪತ್ನಿ ರೀಮ (33) ಗಾಯಗೊಂಡ ದಂಪತಿಗಳು.

ಕಲ್ಮಾಡಿ ಸಮೀಪ ಇವರು ಬೈಕ್ ನಲ್ಲಿ ತಮ್ಮ ಮಗನ ಸಮೇತ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪರಿಣಾಮ ರಸ್ತೆಗೆ ಬಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲು ಆಪದ್ಭಾಂಧವ ಈಶ್ವರ್ ಮಲ್ಪೆ ಅವರು ನೆರವಾದರು.

ಬೈಕ್ ನಲ್ಲಿದ್ದ ದಂಪತಿಯ ಪುತ್ರ ಸಣ್ಣ ಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!