Saturday, May 4, 2024
spot_imgspot_img
spot_imgspot_img

ಮಹಿಳೆ ಕಾಮೋತ್ತೇಜಕ ವಸ್ತು ಎಂದ ವಿವಿ; ಮಹಿಳೆಯರ ಅಪಮಾನದ ವಿರುದ್ಧ ಸೋಶಿಯಾಲ್ ಮೀಡಿಯಾದಲ್ಲಿ ಆಕ್ರೋಶ

- Advertisement -G L Acharya panikkar
- Advertisement -

ಬೆಂಗಳೂರು : ದೇಶದಲ್ಲಿ ಮಹಿಳೆಯರಿಗೆ ವಿಶೇಷ ಗೌರವವನ್ನು ನೀಡಲಾಗುತ್ತದೆ. ದೇವತೆಯ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ. ಸರ್ಕಾರ ಕೂಡ ವಿಶೇಷ ಸ್ಥಾನಮಾನಗಳನ್ನು ನೀಡಿ ಮಹಿಳೆಯರ ಕಲ್ಯಾಣದತ್ತ ಗಮನಹರಿಸುತ್ತದೆ. ಆದರೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ನಡೆಸಿದ ಪರೀಕ್ಷೆಯಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಪ್ರಶ್ನೆಯೊಂದನ್ನು ಕೇಳಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಬ್ಯಾಚುಲರ್ ಆಫ್​ ಆಯುರ್ವೇದ, ಮೆಡಿಸಿನ್​ ಹಾಗೂ ಸರ್ಜರಿ ಕೋರ್ಸಿನ ಅಂತಿಮ ವರ್ಷದ ಪರೀಕ್ಷೆಯಲ್ಲಿ ಮಹಿಳೆ ಕಾಮೋತ್ತೇಜಕ ವಸ್ತು ಎಂಬ ವಿಚಾರದ ಕುರಿತು ಪ್ರಬಂಧ ಬರೆಯುವಂತೆ ಹೇಳಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಬಿಎಎಂಎಸ್​ ಕೋರ್ಸ್​ ಅಭ್ಯಾಸ ಮಾಡುತ್ತಿರುವ ನಾಲ್ಕನೇ ವರ್ಷದ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯಲ್ಲಿ ಐದು ಅಂಕಗಳಿಗೆ ಇಂತಹದ್ದೊಂದು ಪ್ರಶ್ನೆಯನ್ನು ಕೇಳಲಾಗಿದೆ. ಈ ವಿಚಾರ ಎಲ್ಲೆಡೆ ಬಹಿರಂಗವಾಗುತ್ತಿದ್ದಂತೆಯೇ ಮಹಿಳೆಗೆ ವಿಶ್ವ ವಿದ್ಯಾಲಯವು ಅಗೌರವ ತೋರಿದೆ. ವಿದ್ಯಾರ್ಥಿಗಳಿಗೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯವು ವಿದ್ಯಾರ್ಥಿಗಳಲ್ಲಿ ಮಹಿಳೆಯರ ಬಗ್ಗೆ ಅಗೌರವ ತೋರುವ ಪಾಠವನ್ನೇ ಮಾಡುತ್ತಿದೆ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ .

ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಪ್ರತೀತಿಯನ್ನು ಪಡೆದಿರುವ ಋಷಿ ಸುಶ್ರುತ ಬರೆದಿರುವ ಶಾಸ್ತ್ರೀಯ ಆರ್ಯುವೇದ ಗ್ರಂಥದ ಅಧ್ಯಾಯದಲ್ಲಿ ಮಹಿಳೆಯನ್ನು ಮಕ್ಕಳನ್ನು ಹೆರುವ ವಸ್ತು ಹಾಗೂ ಕಾಮೋತ್ತೇಜಕ ವಸ್ತು ಎಂದು ಉಲ್ಲೇಖಿಸಲಾಗಿದೆ. ಈ ಪಠ್ಯವನ್ನು ಪರಿಷ್ಕರಿಸಬೇಕು. ಭೋಗದ ವಸ್ತುವಿನಂತೆ ನೋಡಬಾರದು. ಇವುಗಳು ಅತ್ಯಾಚಾರಕ್ಕೆ ಪ್ರೇರಣೆ ನೀಡುವ ಪಾಠಗಳು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!