Tuesday, April 30, 2024
spot_imgspot_img
spot_imgspot_img

ಮಾಜಿ ಗರ್ಲ್’ಫ್ರೆಂಡ್ ತಾಯಿಗೆ ಕಿಡ್ನಿ ದಾನ ಮಾಡಿದ ನಿಸ್ವಾರ್ಥ ಪ್ರೇಮಿ..! ಆದ್ರೆ ಆಕೆ ಮಾಡಿದ್ದು..?

- Advertisement -G L Acharya panikkar
- Advertisement -
vtv vitla
vtv vitla
vtv vitla

ಮಾಜಿ-ಗರ್ಲ್’ಫ್ರೆಂಡ್ ತಾಯಿಗೆ ಕಿಡ್ನಿ ದಾನ ಮಾಡಿದ ನಿಸ್ವಾರ್ಥ ಪ್ರೇಮಕ್ಕೆ ಪ್ರತಿಯಾಗಿ ತನ್ನ ಮಾಜಿ ಪ್ರೇಯಸಿ ಮಾಡಿದ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದ ನಿವಾಸಿ ಉಝೈಲ್ ಮಾರ್ಟಿನೆಝ್ ಈ ಪ್ರೇಮ ಶೋಕ ಕಥೆಯೊಂದರ ನಾಯಕ..!

ಶಿಕ್ಷಕನಾಗಿರುವ ಈತ ನಿಸ್ವಾರ್ಥ ಪ್ರೇಮಕ್ಕೆ ಪ್ರತಿಯಾಗಿ ತನ್ನ ಮಾಜಿ ಪ್ರೇಯಸಿ ಮಾಡಿದ ವಂಚನೆಯನ್ನು ವಿವರಿಸಿದ್ದಾರೆ. ತನ್ನ ಈ ಹೃದಯಸ್ಪರ್ಶಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುವ ಬದಲಿಗೆ ಆಕೆ ಉಝೈಲ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಲ್ಲದೇ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ತನ್ನ ಈ ನೋವಿನ ಕಥೆಯನ್ನು ತಡೆದುಕೊಳ್ಳಲಾರದ ಉಝೈಲ್ ವಿಷಯವನ್ನೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗಿದ್ದು, ಬಹಳಷ್ಟು ಪತ್ರಿಕೆಗಳಲ್ಲಿ ಸುದ್ದಿಯೂ ಆಗಿದೆ.

ತಾನೀಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದೇನೆಂದು ತಿಳಿಸಿರುವ ಮಾರ್ಟಿನೆಝ್, ಕಿಡ್ನಿ ಕಸಿಯಿಂದ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

suvarna gold
- Advertisement -

Related news

error: Content is protected !!