Friday, May 3, 2024
spot_imgspot_img
spot_imgspot_img

ಮಾಣಿ ಬಾನೊಟ್ಟು ಶ್ರೀ ಉಮಾಮಹೇಶ್ವರ ಕ್ಷೇತ್ರ ಜೀಣೋದ್ಧಾರ ಕುರಿತು ಧರ್ಮಜಾಗ್ರತಿ ಅಭಿಯಾನ ಹಾಗೂ ಶಿವರಾತ್ರಿ ವಿಶೇಷ ಭಜನಾ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla

ಮಾಣಿ ಬಾನೊಟ್ಟು ಶ್ರೀ ಉಮಾಮಹೇಶ್ವರ ಕ್ಷೇತ್ರದ ಜೀರ್ಣೋದ್ಧಾರ ಕುರಿತು ಧರ್ಮಜಾಗ್ರತಿ ಅಭಿಯಾನದ ಶಿವರಾತ್ರಿ ವಿಶೇಷ ಭಜನಾ ಕಾರ್ಯಕ್ರಮ ಇಂದು ಜರುಗಿತು.

ಮಾಣಿ ಸುತ್ತಮುತ್ತಲಿನ ಕುಣಿತ ಭಜನಾ ತಂಡಗಳು ಭಜನೆಯ ಮುಖಾಂತರ ಭಜನಾ ಸಂಕೀರ್ತನೆಯ ಮೂಲಕ ಜೀರ್ಣೋದ್ಧಾರಗೊಳ್ಳಲಿರುವ ಶಿವ ಸಾನಿಧ್ಯಕ್ಕೆ ತೆರಳಿ ವಿಶೇಷ ಭಜನೆ ನಡೆಸಲಾಯಿತು.ಶ್ರೀ ವಿನಾಯಕ ಶ್ರೀ ದೇವಿ ಭಜನ ಮಂದಿರ ಬರಿಮಾರು ದುರ್ಗಾಪರಮೇಶ್ವರಿ ಭಜನಾ ಮಂಡಳಿ ನೇರಳಕಟ್ಟೆ, ಶ್ರೀ ಕಾನಲ್ತಾಯ ಮಹಾಕಾಳಿ ‌ಭಜನಾ ಮಂಡಳಿ ಕಲ್ಲೇಟಿ ,ಶ್ರೀ ದೇವಿ ಭಜನಾ ಮಂಡಳಿ ಪೆರಾಜೆ,ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆರಾಜೆ, ಮತ್ತು ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರು ಹಾಗೂ ಭಕ್ತರು ಈ ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ತಾನದ ಆಡಳಿತ ಮೊಕ್ತೇಸರ , ಮಾಣಿಗುತ್ತು ಸಚಿನ್ ರೈ, ಸದಾಶಿವ ಆಚಾರ್ಯ, ನಾರಾಯಣ ರೈ ಕೊಡಾಜೆ, ನಾರಾಯಣ ಆಳ್ವ ಕೊಡಾಜೆ, ಮಾಣಿ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಪಂಚಾಯತ್ ಸದಸ್ಯರಾದ ತೋಟ ನಾರಾಯಣ ಶೆಟ್ಟಿ, ಗಿರಿಯಪ್ಪ ಪೂಜಾರಿ, ದಿನಕರ ನಾಯಕ್ ನೇರಳಕಟ್ಟೆ, ರಾಮಕೃಷ್ಣ ಆಳ್ವ ಕೊಡಾಜೆ, ವೆಂಕಟರಮಣ ಪೈ, ನರಸಿಂಹ ಶೆಟ್ಟಿ, ಭರತ್ ಪೂಜಾರಿ ಕೋಡಿ, ನಿತಿನ್ ಸಾಲ್ಯಾನ್, ವಿಶ್ವನಾಥ ಕುಲಾಲ್, ಗಿರೀಶ್ ನಾಯ್ಕ್, ತೋಟ ಬಾಬು ಶೆಟ್ಟಿ, ಹರೀಶ್ ಮಾಣಿ, ಜನಾರ್ದನ ಪೂಜಾರಿ, ಚಂದ್ರಹಾಸ ಕಲ್ಲೇಟಿ, ಕುಮಾರ್ ಪಿ.ಎಸ್., ನಿರಂಜನ ಭಟ್, ರಘುಪತಿ ನಾಯಕ್ ಮುರುವ ಮೊದಲಾದವರು ಸೇರಿದಂತೆ ಹಲವು ಸಂಖ್ಯೆಯಲ್ಲಿ ಗ್ರಾಮಸ್ತರು ಊರ – ಪರವೂರ ಭಕ್ತರು ಉಪಸ್ಥಿತರಿದ್ದರು.

ಶಿವಭಕ್ತರು ಮಾಣಿ ಸಂಘಟನೆ ಈ ಶಿವರಾತ್ರಿ ಕಾರ್ಯಕ್ರಮ ಆಯೋಜನೆ ಮಾಡಿತ್ತು.

- Advertisement -

Related news

error: Content is protected !!