Friday, May 3, 2024
spot_imgspot_img
spot_imgspot_img

ಮಾದಕ ದ್ರವ್ಯ‌ MDMA ಸಹಿತ ವಿಟ್ಲದ ಕುಖ್ಯಾತ ಕ್ರಿಮಿನಲ್ ಸಾದಿಕ್@ಬ್ಲೇಡ್ ಸಾಧಿಕ್ ಬಂಧನ.!

- Advertisement -G L Acharya panikkar
- Advertisement -

ಸಾಧಿಕ್ ಬಂಧಿಸಿದ ಸಿಸಿಬಿ ತಂಡ 50 ಗ್ರಾಂ ತೂಕದ 2,50,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಕಾರು, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ ಸಹಿತ 3,65,500 ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದಿದ್ದು ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಾದಿಕ್‌ ವಿರುದ್ಧ ಈ ಹಿಂದೆ ವಿಟ್ಲ ಪೊಲೀಸ್ ಠಾಣೆಯಲ್ಲಿ 8 ಹಲ್ಲೆ, ಬೆದರಿಕೆ ಪ್ರಕರಣಗಳು, 4 ಕೊಲೆಯತ್ನ ಪ್ರಕರಣಗಳು, ಪುತ್ತೂರು ನಗರ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣಗಳು, ಉಪ್ಪಿನಂಗಂಡಿ ಠಾಣೆಯಲ್ಲಿ ಮಾನಭಂಗ ಮತ್ತು ಅಪಹರಣ ಪ್ರಕರಣ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಹಲ್ಲೆ ಪ್ರಕರಣ, ಮಂಗಳೂರು ಕಾವೂರು ಠಾಣೆಯಲ್ಲಿ ದರೋಡೆ ಪ್ರಕರಣ, ಬೆಂಗಳೂರು ಹೆಬ್ಬಾಳ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಸೇರಿದಂತೆ ಈತನ ವಿರುದ್ಧ ಈವರೆಗೆ 17 ಪ್ರಕರಣಗಳು ದಾಖಲಾಗಿವೆ.

ನಗರ ಹಾಗೂ ಕೇರಳದ ವಿವಿಧೆಡೆ ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎಯನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿ ವಿಟ್ಲದ ವಸತಿ ಸಮುಚ್ಛಯದಲ್ಲಿ ವಾಸವಾಗಿದ್ದ ಹಸನ್ ಸಾದಿಕ್ ಯಾನೆ ಬ್ಲೇಡ್ ಸಾಧಿಕ್ ಬಂಧನ.

ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್.ಎಂ, ಎಸ್ಸೈ ಗಳಾದ ರಾಜೇಂದ್ರ ಬಿ, ನರೇಂದ್ರ, ಶರಣಪ್ಪ ಭಂಡಾರಿ,ಸುದೀಪ್ ಎಂ.ವಿ.ಮತ್ತು ಸಿಸಿಬಿ ತಂಡ ಭಾಗವಹಿಸಿದ್ಧು ಈತನ ಸಹಚರರಿಗಾಗಿ ತೀವ್ರ ಶೋಧ ಮುಂದುವರಿದಿದೆ.

- Advertisement -

Related news

error: Content is protected !!