Monday, April 29, 2024
spot_imgspot_img
spot_imgspot_img

ಮಾನಸಿಕ ರೋಗಿಗಳಿಬ್ಬರ ನಡುವೆ ಆಸ್ಪತ್ರೆಯಲ್ಲೇ ಚಿಗುರಿದ ಪ್ರೀತಿ; ವಿವಾಹಕ್ಕೆ ಸಜ್ಜು

- Advertisement -G L Acharya panikkar
- Advertisement -
vtv vitla

ಚೆನ್ನೈನ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಮಾನಸಿಕ‌‌ ರೋಗಿಗಳಿಬ್ಬರ ನಡುವೆ ಪ್ರೀತಿ‌ ಚಿಗುರಿದ್ದು,ಇಬ್ಬರು ವಿವಾಹವಾಗಲು ತೀರ್ಮಾನಿಸಿ‌ ಇದೀಗ ಸುದ್ದಿಯಾಗಿದ್ದಾರೆ.

ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 42 ವರ್ಷದ ಮಹೇಂದ್ರನ್ ಮತ್ತು 36 ವರ್ಷದ ದೀಪಾ ಮಧ್ಯೆ ಪ್ರೀತಿ ಹುಟ್ಟಿದ್ದು, ಇಬ್ಬರು ವಿವಾಹವಾಗುವುದಾಗಿ ಹೇಳಿದ್ದಾರೆ.ಇವರಿಬ್ಬರೂ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಆಸ್ಪತ್ರೆಗೆ ಎರಡು ವರ್ಷಗಳ ಮೊದಲು‌ ದಾಖಲಾಗಿದ್ದರು.

ಕೌಟುಂಬಿಕ ಕಲಹದಿಂದ ಮಹೇಂದ್ರನ್ ‘ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್’ನಿಂದ ಬಳಲುತ್ತಿದ್ದರು. ತಂದೆಯ ಸಾವಿನಿಂದ ದೀಪಾ ಖಿನ್ನತೆಗೆ ಒಳಗಾಗಿದ್ದರು.

ಈ ಕುರಿತು ಮಹೇಂದ್ರನ್ ಮಾತನಾಡಿ, ಕುಟುಂಬದ ಆಸ್ತಿ ಸಮಸ್ಯೆಯಿಂದ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದು, ಮೊದಲು ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದೆ.ಚಿಕಿತ್ಸೆ ಬಳಿಕ‌ ರಿಕವರಿ‌ ಆಗಿದ್ದು ಕಿಲ್ಪಾಕ್ ಮೆಂಟಲ್ ಅಸ್ಸಿಲಮ್​ನ ಡೇ ಕೇರ್ ಸೆಂಟರ್ ನಲ್ಲೆ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ದೀಪಾ ಅಲ್ಲಿಗೆ ಚಿಕಿತ್ಸೆಗಾಗಿ ಬಂದಿದ್ದರು.ನಾನು ಅವರನ್ನು ಚೆನ್ನಾಗಿ ನೋಡಿಕೊಂಡೆ.ನಮ್ಮ‌ ನಡುವೆ ಪ್ರೀತಿಯಾಯ್ತು, ಇದೀಗ ಮದುವೆಗೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ದೀಪಾ ತಾಯಿ ಮನಸ್ಸಿನವಳು,ನನ್ನ ತಾಯಿ ಶಿಕ್ಷಕಿ, ದೀಪಾ ಶಿಕ್ಷಕಿ.ನನ್ನ ಬದುಕಿನ ಸಂಬಂಧಗಳು ದೀಪಾಗೆ ಹೊಂದಿಕೊಳ್ಳುತ್ತಿದೆ.ಇದರಿಂದ ಒಂದಾಗಿ ಜೀವನ‌ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ದೀಪಾ ಈ ಬಗ್ಗೆ ಮಾತನಾಡಿ, ನನ್ನ ತಂದೆ 2016ರಲ್ಲಿ ನಿಧನರಾದರು.ಅವರ ಸಾವಿನ ದುಃಖವನ್ನು ಸಹಿಸಲಾಗದೆ ನಾನು ಮಾನಸಿಕ ಅಸ್ವಸ್ಥಳಾದೆ.ಅದರ ನಂತರ ನಾನು ಮಾನಸಿಕ ಚಿಕಿತ್ಸೆಗೆ ಬಂದೆ.ಈಗ ಸರಿಯಾಗಿದ್ದೇನೆ ಎಂದು‌ ಹೇಳಿದ್ದಾರೆ. ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಅರಳಿದ ಪ್ರೇಮಕಥೆ ಇದೀಗ ಭಾರೀ ಸುದ್ದಿಯಾಗಿದ್ದು,ಬತ್ತಿ‌ ಹೋಗಿದ್ದ ಎರಡು‌‌ ಜೀವಗಳ ನಡುವೆ ಪ್ರೇಮ ಹುಟ್ಟಿ ಹೊಸ ಬದುಕು‌ ಕಟ್ಟಿಕೊಳ್ಳುವಂತಾಗಿದೆ.

- Advertisement -

Related news

error: Content is protected !!