Friday, June 19, 2026
spot_imgspot_img
spot_imgspot_img

ಮಾರ್ನಬೈಲಿನಿಂದ ಕಬಕದವರೆಗೆ ರಸ್ತೆ ಮರು ಡಾಂಬರೀಕರಣ; 13 ಕೋಟಿ ಅನುದಾನದ ಯೋಜನೆ – ಶಾಸಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

- Advertisement -
- Advertisement -

ವಿಟ್ಲ: ಮಾರ್ನಬೈಲಿನಿಂದ ಕಬಕದವರೆಗೆ ರಸ್ತೆ ಮರು ಡಾಂಬರೀಕರಣಕ್ಕೆ ರಾಜ್ಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿ ಯೋಜನೆಯಿಂದ 13 ಕೋಟಿ ಹಣ ಬಿಡುಗಡೆಯಾಗಿದ್ದು ಮುನಿಯಾಲು ಉದಯ್ ಶೆಟ್ಟಿ ಅವರು ಟೆಂಡರ್ ವಹಿಸಿಕೊಂಡಿದ್ದಾರೆ.

ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್ ಅವರ ಅನುದಾನದಲ್ಲಿ ಈ ಯೋಜನೆ ಸಿದ್ಧವಾಗಿದೆ. ಮಾರ್ನಬೈಲು- ಮಂಚಿ, ಸಾಲೆತ್ತೂರು ರಸ್ತೆ ಹಾಗೂ ಕಡಂಬುವಿನಿಂದ ಕಬಕದವರೆಗೆ (ವಿಟ್ಲ ಪಟ್ಟಣ ರಸ್ತೆ ಹೊರತುಪಡಿಸಿ) 7 ಮೀಟರ್‌ ಅಗಲವಾಗಲಿದೆ.

ಇಬ್ಬರು ಶಾಸಕರ ನಡೆಗೆ ಮೆಚ್ಚುಗೆ..!
ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್ ಅವರ ಅಬಿವೃದ್ಧಿ ಕಾರ್ಯಕ್ಕೆ ಈಗಾಗಲೇ ಜನರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಜನಪ್ರತಿಧಿಗಳ ನಡೆಗೆ ಮೆಚ್ಚುಗೆಯ ಮಾಹಪೂರ ಹರಿದು ಬಂದಿದೆ.

- Advertisement -

Related news

error: Content is protected !!