Sunday, May 19, 2024
spot_imgspot_img
spot_imgspot_img

ಮಾ. 27ರಂದು ದಿವಾಕರ ದಾಸ್ ನೇರ್ಲಾಜೆ ರವರ ಮಾಲಕತ್ವದ ಎಸ್‌ಎಲ್‌ವಿ ಬುಕ್ ಹೌಸ್ ನ 6 ನೇ ಮಳಿಗೆ ಮಂಗಳೂರಿನಲ್ಲಿ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ: ರಾಜ್ಯದ ಹೆಸರಾಂತ ಎಸ್‌ಎಲ್‌ವಿ ಬುಕ್ಸ್ ಇಂಡಿಯಾ ಪ್ರೈ ಲಿ. ನ ಅಧೀನ ಸಂಸ್ಥೆಯಾದ ಎಸ್‌ಎಲ್‌ವಿ ಬುಕ್ ಹೌಸ್ ನ 6 ನೇ ಶಾಖಾ ಮಳಿಗೆ ಮಂಗಳೂರಿನ ಮಾರ್ನಮಿಕಟ್ಟೆಯಲ್ಲಿ ಮಾ. 27 ರಂದು ಶುಭಾರಂಭಗೊಳ್ಳಲಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವೆಂಕಟ್ರಮಣ ಅಸ್ರಣ್ಣ, ದಿವಾಕರ ದಾಸ್ ರವರ ಗುರುಗಳಾದ ಭವಾನಿ ಟೀಚರ್ ಕೊಲ್ಯರವರ ಉಪಸ್ಥಿತಿಯೊಂದಿಗೆ ಶುಭಾರಂಭ ಕಾರ್ಯಕ್ರಮ ನಡೆಯಲಿದೆ.

vtv vitla
vtv vitla

ಶೂನ್ಯದಿಂದ ಆರಂಭಿಸಿದ ಪ್ರತಿಯೊಬ್ಬ ಸಾಧಕ ಉದ್ಯಮಿಯ ಹಿಂದೆ ಕಠಿಣ ಪರಿಶ್ರಮದ ಕಥೆಯೊಂದು ಅಡಗಿರುತ್ತದೆ. ಬಹುಶಃ ಇದಕ್ಕೆ‌ ಕರ್ನಾಟಕ ರಾಜ್ಯದ ಹೆಸರಾಂತ ಎಸ್‌ಎಲ್‌ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ರವರೂ ಹೊರತಾಗಿಲ್ಲ. ಸಾಧನೆಯ ಲಕ್ಷ್ಯದೆಡೆಗೆ ಸಾಗಿದ ಅವರ ಉದ್ಯಮ ಕ್ಷೇತ್ರ ಇಂದು ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಯುತ್ತಿದೆ.

ಮೈಸೂರಿನಲ್ಲಿ ಉದ್ಯಮಿಯಾದರೂ ಹುಟ್ಟೂರಿನ ಅಭಿಮಾನ, ದೇವರ ಭಕ್ತಿ ಅವರಲ್ಲಿ ವಿರಾಜಮಾನವಾಗಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಉದ್ಯಮದಲ್ಲಿ‌ ಪಡೆದುದನ್ನು ದಾನ ಧರ್ಮದ ಮುಖೇನ ಸಮಾಜಕ್ಕೆ ಸೇವೆ ರೂಪದಲ್ಲಿ ನೀಡಿ ಗುರುತಿಸಿಕೊಂಡಿದ್ದಾರೆ. ಕೊರೊನಾದಂತಹ ಸಂಕಷ್ಟ‌‌ ಕಾಲದಲ್ಲಿ ಅನೇಕರಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಕೊರೊನಾ ಕಾಲದಲ್ಲಿ ಎಲ್ಲಾ ಉದ್ಯಮ ಕ್ಷೇತ್ರಗಳೂ ತತ್ತರಿಸಿದ ವೇಳೆಯೂ ಧೃತಿಗೆಡದ ದಿವಾಕರ ದಾಸ್ ರವರು ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ವೇತನ ಭದ್ರತೆ ನೀಡಿರುವುದು ಇವರ ಹೃದಯ ವೈಶಾಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಸಾಮಾಜಿಕ ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ತನ್ನ ಊರು, ಗ್ರಾಮದಲ್ಲಿ ಎಸ್‌ಎಲ್‌ವಿ ಹೆಸರು ಸದಾ ಕೇಳಿ ಬರುತ್ತದೆ. ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನಃ ಎಂಬಂತೆ ಇವರ ಸೇವೆಗೆ ಪ್ರತಿಫಲವನ್ನು ಅಪೇಕ್ಷಿಸಿದವರಲ್ಲ. ಹಾಗಾಗಿ ವರ್ಷದಿಂದ ವರ್ಷಕ್ಕೆ ಇವರ ಉದ್ಯಮವೂ ಪ್ರಗತಿ ಪಥದಲ್ಲಿದೆ.

10 ವರ್ಷಗಳ‌ ಉದ್ಯಮ ಕ್ಷೇತ್ರದ ಹೆಸರು ಎಸ್.ಎಲ್.ವಿ ಗ್ರೂಪ್ಸ್ ನ ಪ್ರಧಾನ ಕಚೇರಿ ಮೈಸೂರಿನ ಬೋಗದಿಯಲ್ಲಿದೆ. ಮೈಸೂರಿನ ವಿಜಯನಗರದಲ್ಲಿ ಒಂದು ಶಾಖೆ, ಮಂಗಳೂರಿನ ಬಿಜೈ ಮತ್ತು ಕೊಡಿಯಾಲ್‌ಬೈಲ್‌ನಲ್ಲಿ ಎರಡು ಶಾಖೆಯನ್ನು ಹೊಂದಿದ್ದು, ಬೆಂಗಳೂರಿನ ಆರ್.ಆರ್. ನಗರದಲ್ಲಿ ಹಾಗೂ ಚಾಮರಾಜನಗರದಲ್ಲಿ ತಲಾ ಒಂದು ಶಾಖೆ ಕಾರ್ಯಾಚರಿಸುತ್ತಿದೆ. ಇದೀಗ ಮಂಗಳೂರಿನಲ್ಲಿ 3 ನೇ ಶಾಖೆ ಮತ್ತು ರಾಜ್ಯದಲ್ಲಿ 6 ನೇ ಮಳಿಗೆಯನ್ನು ತೆರೆದು ತನ್ನ ಕಾರ್ಯ ವಿಶಾಲತೆಯನ್ನು‌ ನಿರಂತರ ಕಾಯ್ದುಕೊಳ್ಳುತ್ತಾ ಪ್ರಗತಿಪಥದಲ್ಲಿ ಸಾಗುತ್ತಿದೆ.

ಕಳೆದ 10 ವರ್ಷಗಳಿಂದ ಎಸ್ ಎಲ್ ವಿ ಶಿಕ್ಷಣ ಕ್ಷೇತ್ರದಲ್ಲಿ ರಾಜದಲ್ಲಿಯೇ ಹೆಸರುವಾಸಿಯಾಗಿದೆ. ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಾರಾಟ ಕಂಪೆನಿ ಇದಾಗಿದ್ದು, ಸಿಬಿಎಸ್ ಇ, ಐಸಿಐಸಿಐ ಮತ್ತು ರಾಜ್ಯ ಪಠ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಪುಸ್ತಕಗಳನ್ನು ಒದಗಿಸಿಕೊಡುವುದರಲ್ಲಿ ಎಸ್ ಎಲ್ ವಿ ರಾಜ್ಯದಲ್ಲಿ ಮನೆಮಾತಾಗಿದೆ. ಪುತ್ತೂರಿನಲ್ಲಿಯೂ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಸೇರಿದಂತೆ‌ ದ.ಕ. ಜಿಲ್ಲೆ ಸಹಿತ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಎಸ್ ಎಲ್‌ವಿ ಮುಖೇನ ಇಂದು ನೂರಾರು ಪಠ್ಯ ಪುಸ್ತಕಗಳನ್ನು ತರಿಸಿಕೊಳ್ಳುತ್ತಿರುವುದು ಇದರ ಕಾರ್ಯಕ್ಷಮತೆಯನ್ನು ತೋರ್ಪಡಿಸುತ್ತಿದೆ.

ರಾಜ್ಯದ ಪ್ರಸಿದ್ಧ ಪಬ್ಲಿಕೇಶನ್ ಸಂಸ್ಥೆಗಳು ಪ್ರಕಟಿಸುವ ಎಲ್ಲಾ ರೀತಿಯ ಪಠ್ಯ ಮತ್ತು ಪಠ್ಯೇತರ ಪುಸ್ತಕಗಳು ಮತ್ತು ಸ್ಟೇಷನರಿ ಐಟಂಗಳನ್ನು ರಾಜ್ಯದಾದ್ಯಂತ ಎಸ್‌ಎಲ್‌ವಿ ಬುಕ್ ಏಜೆನ್ಸೀಸ್ ವಿತರಿಸುತ್ತಿದೆ. ಎಸ್‌ಎಲ್‌ವಿ ಬುಕ್ಸ್ ಇಂಡಿಯಾ ಪ್ರೈ. ಲಿ. ನ ಅಧೀನ ಸಂಸ್ಥೆಗಳಲ್ಲಿ ಎಸ್‌ಎಲ್‌ವಿ ಬುಕ್ ಏಜೆನ್ಸೀಸ್, ಎಸ್‌ಎಲ್‌ವಿ ಬುಕ್ ಹೌಸ್ ಔಟ್‌ಲೆಟ್, ತನ್ನದೇ ಆದ ‘ವೈಟ್ ಸ್ಪೇಸ್’ ನೋಟ್ ಬುಕ್ ವಿತರಿಸುತ್ತಿದೆ.

vtv vitla
vtv vitla
- Advertisement -

Related news

error: Content is protected !!