Wednesday, July 2, 2025
spot_imgspot_img
spot_imgspot_img

‘ಮುಂದಿನ 10 ವರ್ಷಗಳಲ್ಲಿ ದೇಶವು ದಾಖಲೆಯ ಸಂಖ್ಯೆಯ ವೈದ್ಯರನ್ನು ಪಡೆಯಲಿದೆ’; ಪ್ರಧಾನಿ ಮೋದಿ

- Advertisement -
- Advertisement -

ಗುಜರಾತ್: ಭಾರತದ ಪ್ರತಿ ಜಿಲ್ಲೆಯಲ್ಲಿ ಒಂದಾದರೂ ವೈದ್ಯಕೀಯ ಕಾಲೇಜು ಸ್ಥಾಪಿಸುವ ಕೇಂದ್ರ ಸರ್ಕಾರದ ನೀತಿಯಿಂದಾಗಿ ಮುಂದಿನ 10 ವರ್ಷಗಳಲ್ಲಿ ದೇಶವು ದಾಖಲೆಯ ಸಂಖ್ಯೆಯ ವೈದ್ಯರನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಹೊಂದುವ ಮತ್ತು ವೈದ್ಯಕೀಯ ಶಿಕ್ಷಣವು ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಗುರಿಯು 10 ವರ್ಷಗಳ ಬಳಿಕ ದೇಶವು ದಾಖಲೆಯ ಸಂಖ್ಯೆಯ ವೈದ್ಯರನ್ನು ಪಡೆಯುತ್ತದೆ ಎಂದರು.

vtv vitla
vtv vitla

ಇನ್ನು ಗುಜರಾತ್‌‌ನಲ್ಲಿ ಎರಡು ದಶಕಗಳ ಹಿಂದೆ ಕೇವಲ ಒಂಬತ್ತು ವೈದ್ಯಕೀಯ ಕಾಲೇಜುಗಳಿದ್ದು, ಆದರೆ ಕಳೆದ 20 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣದ ಸನ್ನಿವೇಶವು ವ್ಯಾಪಕವಾಗಿ ಸುಧಾರಿಸಿದೆ. ಈಗ ಗುಜರಾತ್‌‌ನಲ್ಲಿ ಒಂದು ಏಮ್ಸ್ ಮತ್ತು ಮೂರು ಡಜನ್ಗೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ ಎಂದಿದ್ದಾರೆ.

- Advertisement -

Related news

error: Content is protected !!