Sunday, July 6, 2025
spot_imgspot_img
spot_imgspot_img

ಮುಖ ಡಲ್‌ ಆಗಿದ್ಯಾ..? ಈ ನೈಸರ್ಗಿಕ ಪದಾರ್ಥಗಳನ್ನು ಬಳಸಿ

- Advertisement -
- Advertisement -

ದುಬಾರಿ ಮೇಕಪ್‌ ವಸ್ತುಗಳನ್ನು ಬಳಸುವುದಕ್ಕಿಂತ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮುಖದ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕೆ ಇಲ್ಲಿದೆ ನೋಡಿ ಸಿಂಪಲ್‌ ಸಲಹೆ.

ಮುಖದ ಸೌಂದರ್ಯಕ್ಕೂ ಎಲ್ಲರಿಗೂ ಅಗತ್ಯವಾಗಿರುತ್ತದೆ. ಸುಂದರವಾಗಿ ಕಾಣಬೇಕು, ಚರ್ಮ ಕಾಂತಿಯುವಾಗಿರಬೇಕು ಎನ್ನುವ ಆಸೆ ಸಾಮಾನ್ಯ. ಆದರೆ ಹೊರಗಿನ ಧೂಳು, ಹೊಗೆ ಇವುಗಳಿಂದ ಚರ್ಮ ಡಲ್‌ ಆಗಿ ಕಾಣಿಸುತ್ತದೆ. ಎಲ್ಲಾದರೂ ಹೋಗುವಾಗ ಮೇಕಪ್‌ ಮೊರೆಹೋಗಬೇಕಾದ ಸ್ಥಿತಿ ಇಂದು ಎದುರಾಗಿದೆ.

ಅವೆಲ್ಲದರ ಜೊತೆಗೆ ಉತ್ತಮ ಪೋಷಕಾಂಶವಿರುವ ಆಹಾರಗಳನ್ನು ಸೇವನೆ ಮಾಡದೇ ಇರುವುದು, ನಿದ್ದೆಗೆಡುವುದು, ನೀರಿನ ಕೊರತೆ ಇವೆಲ್ಲವುಗಳಿಂದ ಚರ್ಮ ಕಳೆಗುಂದಿದಂತಾಗುತ್ತದೆ. ಇದರಿಂದಾಗಿ ಮೊಡವೆ, ಕಪ್ಪು ಕಲೆ, ಒಣಚರ್ಮದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಚರ್ಮದ ಆರೈಕೆ ಅಗತ್ಯವಾಗಿರುತ್ತದೆ.

ನೈಸರ್ಗಿಕವಾಗಿ ಯಾವೆಲ್ಲಾ ರೀತಿಯಲ್ಲಿ ಚರ್ಮವನ್ನು ಕಾಪಾಡಿಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಅರಿಶಿನ

ನೈಸರ್ಗಿಕವಾಗಿ ಸಿಗುವ ಪದಾರ್ಥಗಳಲ್ಲಿ ಅರಿಶಿನ ಕೂಡ ಒಂದು. ಅರಿಶಿನವು ಮುಖವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸೋರಿಯಾಸಿಸ್‌ನಂತಹ ಅನೇಕ ಸಮಸ್ಯೆಗಳನ್ನು ನಿವಾರಿಸಲು ಅರಿಶಿನವು ಪ್ರಯೋಜನಕಾರಿಯಾಗಿದೆ.

ಇದು ಮೊಡವೆ, ಗುಳ್ಳೆ, ಕಪ್ಪು ಕಲೆಗಳನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ. ಇದು ವಯಸ್ಸಾದಾಗ ಉಂಟಾಗುವ ಸುಕ್ಕುಗಳ ಸಮಸ್ಯೆಯನ್ನು ದೂರ ಮಾಡುತ್ತದೆ. ಹೀಗಾಗಿ ಮುಖದ ಕಾಂತಿಯನ್ನು ಪಡೆಯಲು ಅರಿಶಿನದ ಫೇಸ್‌ ಪ್ಯಾಕ್‌ನ್ನು ಆಗಾಗ ಹಚ್ಚಿಕೊಳ್ಳುತ್ತಿರಿ.

​ಕೊಬ್ಬರಿ ಎಣ್ಣೆ

ತೆಂಗಿನ ಎಣ್ಣೆ ಚರ್ಮದ ಶುಷ್ಕತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದರೊಂದಿಗೆ, ತೆಂಗಿನ ಎಣ್ಣೆಯು ಚರ್ಮಕ್ಕೆ ತಂಪು ನೀಡುತ್ತದೆ ಮತ್ತು ಸಣ್ಣ ಗಾಯಗಳು ಅಥವಾ ಕಡಿತದ ಸಮಸ್ಯೆ ಇದ್ದರೆ ನಿವಾರಣೆ ಮಾಡುತ್ತದೆ. ತೆಂಗಿನ ಎಣ್ಣೆಯು ಸೂರ್ಯನ ರಕ್ಷಣೆ ಮತ್ತು ವಯಸ್ಸಾದ ವಿರೋಧಿ ಗುಣಗಳನ್ನು ಸಹ ಹೊಂದಿದೆ.

ಚರ್ಮವನ್ನು ಮೃದುಗೊಳಿಸಿ, ಒರಟು ಚರ್ಮವನ್ನು ನಿವಾರಣೆ ಮಾಡುತ್ತದೆ.

ಅಲೋವೆರಾ

ಅಲೋವೆರಾವನ್ನು ಔಷಧೀಯ ಗುಣಗಳ ಗಣಿ ಎಂದು ಪರಿಗಣಿಸಲಾಗುತ್ತದೆ ಇದು ಮುಖದ ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ನೈಸರ್ಗಿಕ ಹೊಳಪು ಹೆಚ್ಚಾಗುತ್ತದೆ.

ಇದರೊಂದಿಗೆ ಮುಖದಲ್ಲಿರುವ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಅಲೋವೆರಾದಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿದೆ, ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೆ ಎಣ್ಣೆಯುಕ್ತ ಚರ್ಮವನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

​ಶ್ರೀಗಂಧದ ಫೇಸ್‌ಪ್ಯಾಕ್‌

ವಾರದಲ್ಲಿ ಎರಡು ಬಾರಿ ಶ್ರೀಗಂಧವನ್ನು ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ತ್ವಚೆಯು ಯಂಗ್ ಆಗಿ ಕಾಣುತ್ತದೆ. ಇದಲ್ಲದೆ, ಚರ್ಮವು ಮೃದು ಮತ್ತು ಕಾಂತಿಯುತವಾಗಿರುತ್ತದೆ. ಇದು ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.

ಶ್ರೀಂಗಧದ ಪುಡಿಯನ್ನು ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ಸುಂದರ ತ್ವಚೆಯನ್ನು ಪಡೆಯಬಹುದು. ಆದರೆ ನೆನಪಿಡಿ ಅಂಗಡಿಯಿಂದ ತರುವಾಗ ಉತ್ತಮ ಗುಣಮಟ್ಟದ ಶ್ರೀಗಂಧದ ಪುಡಿಯನ್ನು ಖರೀದಿಸಿ.

- Advertisement -

Related news

error: Content is protected !!