Sunday, June 29, 2025
spot_imgspot_img
spot_imgspot_img

ಮುರಿದು ಬಿತ್ತಾ ಮೂಗುತಿ ಸುಂದರಿಯ ದಾಂಪತ್ಯ; ಸುಖಿ ಜೀವನಕ್ಕೆ ಹುಳಿ ಹಿಂಡಿದ್ರಾ ಆಯೇಷಾ ಒಮರ್..?

- Advertisement -
- Advertisement -

ಮುಂಬೈ: ಭಾರತದ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಅವರಿಬ್ಬರು ವಿಚ್ಛೇದನ ಪಡೆಯುವುದು ಖಚಿತ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ.

ಈ ಜೋಡಿಯು ಪ್ರೀತಿಸಿ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆ ಬಳಿಕ 2018ರಲ್ಲಿ ಒಂದು ಮುದ್ದಾದ ಗಂಡು ಮಗವನ್ನು ಪಡೆದಿದ್ದರು. ಆದರೆ ಇದೀಗ ಈ ಜೋಡಿ ಮಧ್ಯೆ ಬಿರುಕು ಕಂಡುಬಂದಿದ್ದು ಬೇರೆ ಬೇರೆಯಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದಾರೆ. ಸಾನಿಯಾ ದುಬೈನಲ್ಲಿ ತಮ್ಮ ಮಗುವಿನೊಂದಿಗೆ ನೆಲೆಸಿದ್ದು, ಶೋಯೆಬ್‌ ಪಾಕಿಸ್ತಾನದಲ್ಲಿದ್ದಾರೆ ಎನ್ನಲಾಗಿದೆ. ಶೋಯೆಬ್‌ ಪಾಕಿಸ್ತಾನದ ನಟಿಯೊಬ್ಬರ ಜೊತೆ ಸಂಬಂಧ ಹೊಂದಿರುವುದು ವಿಚ್ಛೇದನಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಈ ಬೆಳವಣಿಗೆ ಬಗ್ಗೆ ಸಾನಿಯಾ ಅಥವಾ ಮಲಿಕ್‌ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸಾನಿಯಾ ಹಾಗೂ ಮಲಿಕ್ 2010ರ ಎಪ್ರಿಲ್ 12 ರಂದು ಹೈದರಾಬಾದ್‍ನಲ್ಲಿ ಮುಸ್ಲಿಂ ಪದ್ಧತಿಯಂತೆ ತಾಜ್ ಕೃಷ್ಣ ಹೋಟೆಲ್‍ನಲ್ಲಿ ವಿವಾಹವಾಗಿದ್ದರು. ಆ ಬಳಿಕ ಮಲಿಕ್ ಭಾರತದ ಅಳಿಯ ಎಂದೇ ಕರೆಸಿಕೊಳ್ಳುತ್ತಿದ್ದರು. ಮೂಗುತಿ ಸುಂದರಿಯನ್ನು ವರಿಸಿ ಸಂತೋಷವಾಗಿಯೇ ಇದ್ದ ಮಲಿಕ್ ಇದೀಗ ಬೇರೆಯಾಗಲು ಕಾರಣ ಪಾಕಿಸ್ತಾನದ ನಟಿ ಎಂಬ ಗುಮಾನಿ ಎದ್ದಿದೆ.

ಇದೀಗ ಮಲಿಕ್ ಜೊತೆ ಪಾಕಿಸ್ತಾನದ ನಟಿ ಆಯೇಷಾ ಒಮರ್ ಹೆಸರು ಕೇಳಿ ಬರುತ್ತಿದೆ. ಆಯೇಷಾ ಒಮರ್, ಪಾಕಿಸ್ತಾನಿ ನಟಿ, ಮಾಡೆಲ್ ಮತ್ತು ಯೂಟ್ಯೂಬರ್. ಪಾಕಿಸ್ತಾನ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಆಯೇಷಾ ತನ್ನ ಯೂಟ್ಯೂಬ್ ಖಾತೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮಲಿಕ್‌ ಜೊತೆಗೆ ಕೆಲ ಸಮಯದ ಹಿಂದೆ ಮಾಡಿದ ಬೋಲ್ಡ್‌ ಪೋಟೋಶೂಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆಯೇಷಾ ಒಮರ್ ಮತ್ತು ಶೋಯೆಬ್ ಮಲಿಕ್ ನಡುವಿನ ಆತ್ಮೀಯತೆ ಸಾನಿಯಾ ಜೊತೆಗಿನ ವಿಚ್ಛೇದನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

- Advertisement -

Related news

error: Content is protected !!