Friday, March 29, 2024
spot_imgspot_img
spot_imgspot_img

ಮುಲ್ಕಿ: ಸ್ಕೂಟರ್ ಮತ್ತು ಟ್ಯಾಂಕರ್ ನಡುವೆ ಡಿಕ್ಕಿ; ದಂಪತಿ ಸಾವು

- Advertisement -G L Acharya panikkar
- Advertisement -

ಹೆಜಮಾಡಿ: ಸ್ಕೂಟರ್ ಮತ್ತು ಟ್ಯಾಂಕರ್ ನಡುವೆ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಜಮಾಡಿ ಟೋಲ್ ಗೇಟ್ ಸಮೀಪ ನಡೆದಿದೆ.

ಮೃತ ದುರ್ದೈವಿಗಳನ್ನು ತೀರ್ಥಹಳ್ಳಿ ಕೋಳಿ ಕಾಲು ಗುಡ್ಡೆ ನಿವಾಸಿಗಳಾದ ಅಕ್ಬರ್ ಭಾಷಾ (61) ಹಾಗೂ ಖತೀಜಾ ಬಿ (46) ಎಂದು ಗುರುತಿಸಲಾಗಿದೆ.

ಮೃತ ದಂಪತಿಗಳು ತೀರ್ಥಹಳ್ಳಿಯಿಂದ ಮಂಗಳೂರಿನ ಪಾಸ್ಪೋರ್ಟ್ ಕಚೇರಿಗೆ ತಮ್ಮ ಸ್ಕೂಟರ್ ನಲ್ಲಿ ಹೊರಟಿದ್ದ ವೇಳೆ ಮಂಗಳೂರು ಉಡುಪಿ ರಾಷ್ಟ್ರೀ ಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ಸ್ಕೂಟರ್ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು ದಂಪತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪಡುಬಿದ್ರೆ ಠಾಣಾ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

- Advertisement -

Related news

error: Content is protected !!