Thursday, July 10, 2025
spot_imgspot_img
spot_imgspot_img

ಮೃತ ಹರ್ಷ ಕುಟುಂಬಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರಿಂದ ಆರ್ಥಿಕ ನೆರವು

- Advertisement -
- Advertisement -
vtv vitla
vtv vitla

ಬಂಟ್ವಾಳ: ಮತಾಂಧ ಶಕ್ತಿಗಳಿಂದ ಹತ್ಯೆಯಾದ ಶಿವಮೊಗ್ಗ ಜಿಲ್ಲೆಯ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷನ ಸಾವಿಗೆ ನ್ಯಾಯ ಸಿಗಬೇಕು, ಆತನ ಕೊಲೆ ಮಾಡಿದ ಆರೋಪಿಗಳ ಜೊತೆ, ಅದರ ಹಿಂದಿರುವ ಶಕ್ತಿಗಳ ಪತ್ತೆ ಮಾಡಿ ಕಠಿಣ ಶಿಕ್ಷೆಗೊಳಪಡಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಒತ್ತಾಯಿಸಿದ್ದಾರೆ.

ಕುಟುಂಬದ ಆಧಾರ ಸ್ತಂಭವಾಗಿ, ಕುಟುಂಬದ ನಿರ್ವಹಣೆ ಜವಬ್ದಾರಿಯನ್ನು ಹೊಂದಿದ್ದ ಹರ್ಷ ಅವರು ಮತಾಂಧ ಶಕ್ತಿಗಳ ಕ್ರೂರ ಕೃತ್ಯಕ್ಕೆ ಬಲಿಯಾಗಿದ್ದಾರೆ. ಹರ್ಷನ ಕುಟುಂಬಕ್ಕೆ ನ್ಯಾಯ ಒದಗಿಸುವ ಜೊತೆಗೆ ಕುಟುಂಬದ ನಿರ್ವಹಣೆ ಜವಬ್ದಾರಿಗೆ ಕಷ್ಟವಾಗಬಾರದು ಎಂಬುದು ಹಿಂದೂ ಸಮಾಜದ ಧ್ಯೇಯ ವಾಗಿದೆ. ಈ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವೈಯಕ್ತಿಕ ನೆಲೆಯಲ್ಲಿ ಅವರ ಬ್ಯಾಂಕ್ ಖಾತೆಯಿಂದ ರೂ ಒಂದು ಲಕ್ಷ ಹಣವನ್ನು ಹರ್ಷ ಅವರ ಕುಟುಂಬದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

- Advertisement -

Related news

error: Content is protected !!