Monday, August 31, 2026
spot_imgspot_img
spot_imgspot_img

ಮೈಸೂರಿನಲ್ಲಿ ಎಸ್‌‌. ಎಲ್. ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಶುಭಾರಂಭ; “ವೈಟ್ ಸ್ಪೇಸ್” ನೂತನ ನೋಟ್ ಬುಕ್ ಬಿಡುಗಡೆ

- Advertisement -
- Advertisement -

ವಿಟ್ಲ: ಮೈಸೂರಿನ ಎಸ್.ಎಲ್.ವಿ  ಗ್ರೂಪ್ಸ್ ನ ಮಾಲಕರಾದ ಇಡ್ಕಿದು ಗ್ರಾಮದ ದಿವಾಕರದಾಸ್ ನೇರ್ಲಾಜೆರವರ ಮಾಲಕತ್ವದ ಎಸ್‌‌. ಎಲ್.ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇಂದು ಮೈಸೂರಿನ ಬೊಗಾದಿ ರಿಂಗ್ ರೋಡ್ ನ ಸಮೀಪ ಶುಭಾರಂಭಗೊಂಡಿತು.

ಸಂಸ್ಥೆಯನ್ನು  ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ವೆಂಕಟರಮಣ ಅಸ್ರಣ್ಣರವರು ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ  ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ವೆಂಕಟರಮಣ ಅಸ್ರಣ್ಣ, ಅವರ ಧರ್ಮ ಪತ್ನಿ ವಿಜಯಲಕ್ಷ್ಮೀ, ಕೋಲ್ಪೆಗುತ್ತು ರಾಜಾರಾಮ ಶೆಟ್ಟಿ, ವಿದ್ಯಾ ವಿಕಾಸ್ ಕಾಲೇಜಿನ ಕಾರ್ಯಧ್ಯಕ್ಷರಾದ  ಕವೀಶ್ ಗೌಡ, ಅರ್ಚಕರಾದ ಮಂಜುನಾಥ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ನೂತನ ನೋಟ್ ಬುಕ್ ವೈಟ್ ಸ್ಪೇಸ್  ಬಿಡುಗಡೆ ಗೊಳಿಸಲಾಯಿತು.

ದಯಾನಂದ ಶೆಟ್ಟಿ ಉಜಿರೆಮಾರ್, ಪಿ ಚಂದ್ರಕಾಂತ್ ಬೆಂಗಳೂರು, ರವಿಪ್ರಕಾಶ್ ವಿಟ್ಲ, ಮನೋಜ್ ಶೆಟ್ಟಿ ಮಂಗಳೂರು, ಹೇಮಾವತಿ ದಿವಾಕರ ದಾಸ್ ಮೊದಲಾದವರು‌ ಉಪಸ್ಥಿತರಿದ್ದರು.

ಬೆಳಗ್ಗೆ  ಶ್ರೀ ಚಾಮುಂಡೇಶ್ವರಿ ದೇವಿಯ ಪೂಜಾ ಕಾರ್ಯಕ್ರಮ ನಡೆಯಿತು. ಬಳಿಕ ಮಾಲಕರ ತಂದೆ ದಿ. ರಾಮದಾಸ್ ಹಾಗೂ ತಾಯಿ ದಿ. ಸುಂದರಿ ರಾಮದಾಸ್ ರವರ ಭಾವಚಿತ್ರಕ್ಕೆ ದಿವಾಕರ ದಾಸ್ ದಂಪತಿಗಳು ಪುಷ್ಪಾರ್ಚನೆ ಮಾಡಿದರು. ಸಂಸ್ಥೆಯ ಮಾಲಕ ದಿವಾಕರದಾಸ್ ನೇರ್ಲಾಜೆರವರು ಸ್ವಾಗತಿಸಿದರು. ರಾಮ್ ದಾಸ್ ಶೆಟ್ಟಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!