Thursday, June 18, 2026
spot_imgspot_img
spot_imgspot_img

ಯುದ್ದ ಜೆಟ್‌ ಪತನ ; ಪೈಲೆಟ್ ಸಾವು

- Advertisement -
- Advertisement -

ಮೆರೈನ್ ಕಾರ್ಪ್ಸ್ ಎಫ್/ಎ-18 ಹಾರ್ನೆಟ್ ಯುದ್ದ ಜೆಟ್‌ ಪತನಗೊಂಡ ಹಿನ್ನಲೆ ಒಬ್ಬ ಪೈಲೆಟ್ ಸಾವನ್ನಪ್ಪಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.

ಸ್ಯಾನ್ ಡಿಯಾಗೋ ಬಳಿ ಗುರುವಾರ ರಾತ್ರಿ ದುರ್ಘಟನೆ ನಡೆದಿದ್ದು, ಜೆಟ್‌ ಪತನಗೊಳ್ಳುವ ವೇಳೆ ಅದರಲ್ಲಿ ಓರ್ವ ಪೈಲೆಟ್ ಮಾತ್ರ ಇದ್ದ ಎಂದು ಮೆರೈನ್ ಕಾರ್ಪ್ಸ್ ವಿಂಗ್ ತಿಳಿಸಿದೆ.

ಅಮೆರಿಕದ ಕೋಸ್ಟ್ ಗಾರ್ಡ್ ಮತ್ತು ಸ್ಯಾನ್ ಡಿಯಾಗೋ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಸುದೀರ್ಘ ಹುಡುಕಾಟದ ಬಳಿಕ ಪೈಲಟ್ ಮೃತದೇಹ ಪತ್ತೆಯಾಗಿದೆ. ಈ ವೇಳೆ ಕಾರ್ಯಾಚರಣೆ ನಡೆಸಿದ ಉತ್ತರ ಕೆರೊಲಿನಾದ 2 ನೇ ಮೆರೈನ್ ಏರ್‌ಕ್ರಾಫ್ಟ್ ವಿಂಗ್ ಪೈಲೆಟ್ ಸಾವನ್ನಪಿರುವುದನ್ನು ದೃಢಪಡಿಸಿದೆ.

- Advertisement -

Related news

error: Content is protected !!