Saturday, June 28, 2025
spot_imgspot_img
spot_imgspot_img

ಯುವತಿಯೊಬ್ಬಳ ಮನೆಯಲ್ಲಿ 288 ಕಚ್ಚಾ ಬಾಂಬ್ ಗಳು ಪತ್ತೆ; ಇಬ್ಬರ ಬಂಧನ

- Advertisement -
- Advertisement -

ಲಕ್ಷ್ಮೀಪುರದ 20 ವರ್ಷದ ಯುವತಿಯೊಬ್ಬಳ ಮನೆಯಲ್ಲಿ ಬಾಂಬ್‌ ತಯಾರಿಸುವ ಮಾಹಿತಿ ಮೇರೆಗೆ ಕ್ರೈಂ ಬ್ರಾಂಚ್‌ ಮತ್ತು ಕಾನ್ಪುರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 288 ಕಚ್ಚಾ ಬಾಂಬ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ವಾಸು ಸೋಂಕರ್, ಟೀನಾ ಗುಪ್ತಾ ಬಂಧಿತ ಆರೋಪಿಗಳು.

ವಾಸು ಸೋಂಕರ್ ಎಂಬಾತನನ್ನು ಪೊಲೀಸರು ಮಾ.2ರಂದು 16 ಕಚ್ಚಾ, ಬಾಂಬ್ ಗಳೊಂದಿಗೆ ಬಂಧಿಸಿದ್ದು, ವಿಚಾರಣೆ ವೇಳೆ ಲಕ್ಷ್ಮೀಪುರದಲ್ಲಿರುವ ಗೆಳತಿ ಟೀನಾ ಗುಪ್ತಾ(20) ಮನೆಯಲ್ಲಿ ಕಚ್ಚಾ ಬಾಂಬ್ ತಯಾರಿಸುವ ಬಗ್ಗೆ ಸ್ಪೋಟಕ ವಿಚಾರವನ್ನು ತಿಳಿಸಿದ್ದು ಈ ಮಾಹಿತಿಯ ಮೇರೆಗೆ ದಾಳಿ ನಡೆಸಿ ಟೀನಾ ಗುಪ್ತಾಳನ್ನು ಬಂಧಿಸಲಾಗಿದೆ. ದಾಳಿ ವೇಳೆಯಲ್ಲಿ ಟೀನಾ ಗುಪ್ತಾಳ ಮನೆಯಿಂದ ಕನಿಷ್ಠ 288 ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಿಂದ ನಡೆಯಬಹುದಾದ ದೊಡ್ಡ ಸಂಭವನೀಯ ದುರಂತವೊಂದನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!