Tuesday, May 21, 2024
spot_imgspot_img
spot_imgspot_img

ರಷ್ಯನ್ ಪಡೆಗಳು ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದೆ – ಗಂಭೀರ ಆರೋಪ ಮಾಡಿದ ಉಕ್ರೇನ್ ವಿದೇಶಾಂಗ ಸಚಿವ

- Advertisement -G L Acharya panikkar
- Advertisement -
vtv vitla
vtv vitla

ರಷ್ಯನ್ ಪಡೆಗಳು ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿವೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಗಂಭೀರ ಆರೋಪ ಮಾಡಿದ್ದಾರೆ. ಲಂಡನ್​ನಲ್ಲಿ ಅವರು ಮಾತನಾಡಿದರು. ‘ರಷ್ಯಾದ ಪಡೆಗಳು ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿವೆ’ ಎಂದು ಉಕ್ರೇನ್ ಗಂಭೀರ ಆರೋಪ ಮಾಡಿದೆ.

ಶುಕ್ರವಾರ ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಲಂಡನ್‌ನ ಚಾಥಮ್ ಹೌಸ್ ಥಿಂಕ್-ಟ್ಯಾಂಕ್‌ನಲ್ಲಿ ಮಾತನಾಡುತ್ತಾ ಮೇಲಿನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವುದನ್ನು ಶಿಕ್ಷಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ನ್ಯಾಯಮಂಡಳಿ ರಚಿಸಬೇಕೆನ್ನುವುದನ್ನು ಅವರು ಬೆಂಬಲಿಸಿದ್ದಾರೆ.

Ukraine may join EU sanctions against Belarus, top diplomat says - Russian  Politics & Diplomacy - TASS

ಈ ವೇಳೆ ಅವರು ರಷ್ಯನ್ ಪಡೆಗಳ ಬಗ್ಗೆ ಮಾತನಾಡುತ್ತಾ, ”ದುರದೃಷ್ಟವಶಾತ್, ರಷ್ಯಾದ ಪಡೆಗಳು ಆಕ್ರಮಿಸಿರುವ ಉಕ್ರೇನ್​ ನಗರಗಳಲ್ಲಿ ಮಹಿಳೆಯರ ಮೇಲೆ ಸೈನಿಕರು ಅತ್ಯಾಚಾರ ಎಸಗಿದ ಹಲವು ಪ್ರಕರಣಗಳು ವರದಿಯಾಗಿವೆ” ಎಂದಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಸಚಿವರ ಹೇಳಿಕೆಯ ಬಗ್ಗೆ ಡೈಲಿ ಮೇಲ್ ವರದಿ ಮಾಡಿದೆ. ಉಕ್ರೇನ್ ವಿದೇಶಾಂಗ ಸಚಿವರು ಮಾಡಿರುವ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.

- Advertisement -

Related news

error: Content is protected !!