Friday, May 17, 2024
spot_imgspot_img
spot_imgspot_img

ರಾಷ್ಟ್ರಪತಿ ಚುನಾವಣೆ: ಮುರ್ಮುಗೆ ಭಾರೀ ಮುನ್ನಡೆ

- Advertisement -G L Acharya panikkar
- Advertisement -

ಭಾರತದ 15ನೇ ರಾಷ್ಟ್ರಪತಿ ಹುದ್ದೆ ಯಾರಿಗೆ ಒಲಿಯಲಿದೆ ಎಂಬ ಬಗ್ಗೆ ಇನ್ನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬರಲಿದೆ. ಇಂದು ಬೆಳಗ್ಗೆ 11 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿದೆ. ಇದಾಗಲೇ ಒಂದನೇ ಹಂತದ ಮತ ಎಣಿಕೆ ಮುಗಿದಿದ್ದು, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮುನ್ನಡೆ ಸಾಧಿಸಿದ್ದಾರೆ.

ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಸಂಸತ್ ಭವನದಲ್ಲಿ ಮತದಾನ ಮಾಡಿದ ಸಂಸದರ ಮತವನ್ನು ಎಣಿಸಲಾಗಿದ್ದು, ಚುನಾವಣಾಧಿಕಾರಿ ಮೊದಲ ಸುತ್ತಿನ ಮತ ಎಣಿಕೆಯ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಮೊದಲ ಸುತ್ತಿನ ಮತ ಎಣಿಕೆಯ ನಂತರ ದ್ರೌಪದಿ ಅವರಿಗೆ 540 ಮತಗಳು ಲಭಿಸಿದೆ. ಇವರ ಒಟ್ಟು ಮತದ ಮೌಲ್ಯ 3,78,000 ಆಗಿವೆ. ಯಶವಂತ ಸಿನ್ಹಾ ಅವರಿಗೆ 1,45,600 ಮೌಲ್ಯದ 208 ಮತಗಳು ಲಭಿಸಿದೆ. ಈ ಮೂಲಕ ಶೇ. 72.19 ರಷ್ಟು ಮತ ಮುರ್ಮು ಅವರ ಪಾಲಾಗಿದೆ.

ಮೊದಲ ಹಂತದಲ್ಲಿ ಒಟ್ಟೂ 15 ಮತಗಳು ಅಸಿಂಧುವಾಗಿವೆ.ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಆಡಳಿತ ಪಕ್ಷ ಬಿಜು ಜನತಾ ದಳ (ಬಿಜೆಡಿ), ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ , ಬಹುಜನ ಸಮಾಜ ಪಕ್ಷ , ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ , ತೆಲುಗು ದೇಶಂ ಪಕ್ಷ, ಜನತಾ ದಳ (ಜಾತ್ಯತೀತ), ಶಿರೋಮಣಿ ಅಕಾಲಿದಳ, ಶಿವಸೇನೆಯ ಎರಡೂ ಸತ್ಯಗಳು ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಬೆಂಬಲವಿದೆ. ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಆಮ್ ಆದ್ಮ ಪಕ್ಷ, ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬೆಂಬಲಿಸಿವೆ.

ಜುಲೈ 18 ರಂದು ಸಂಸತ್ ಭವನದಲ್ಲಿ ಮತ್ತು ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಲ್ಲಿ 4,796 ಸಂಸದರು ಮತ್ತು ಶಾಸಕರಲ್ಲಿ 99%ರಷ್ಟು ಮತದಾನ ನಡೆದಿತ್ತು. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳಲಿದೆ. ಹೊಸದಾಗಿ ಆಯ್ಕೆಯಾಗುವ ರಾಷ್ಟ್ರಪತಿ ಇದೇ 25 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಂದು ವೇಳೆ ದೌಪದಿ ಮುರ್ಮ ಅವರು ರಾಷ್ಟ್ರಪತಿಯಾಗಿ ಚುನಾಯಿತರಾದರೆ ದೇಶದ ಮೊದಲ ಬುಡಕಟ್ಟು ಜನಾಂಗದ ಮಹಿಳೆ ಈ ಹುದ್ದೆ ಏರಿರುವ ಕೀರ್ತಿಗೆ ಭಾಜನರಾಗಲಿದ್ದಾರೆ. ಜತೆಗೆ ಎರಡನೆಯ ಮಹಿಳಾ ರಾಷ್ಟ್ರಪತಿ ಎನಿಸಲಿದ್ದಾರೆ .

- Advertisement -

Related news

error: Content is protected !!