Saturday, June 28, 2025
spot_imgspot_img
spot_imgspot_img

ರೈಲು ನಿಲ್ದಾಣದ ಟಿವಿ ಪರದೆಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರ; ಮುಜುಗರಕ್ಕೊಳಗಾದ ಪ್ರಯಾಣಿಕರು..!!

- Advertisement -
- Advertisement -
vtv vitla

ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಅಶ್ಲೀಲ ವಿಡಿಯೋಗಳು ಪ್ಲೇ ಆಗಿದ್ದರಿಂದ ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರು ಮುಜುಗರಕ್ಕೊಳಗಾದ ಪ್ರಸಂಗ ನಡೆದಿದೆ. ಬಿಹಾರದ ರಾಜಧಾನಿ ಪಾಟ್ನಾದ ರೈಲು ನಿಲ್ದಾಣದಲ್ಲಿ ಮೂರು ನಿಮಿಷಗಳ ಕಾಲ ಅಶ್ಲೀಲ ವೀಡಿಯೋ ಪ್ಲೇ ಆಗಿದೆ. ಇದರಿಂದ ಸಣ್ಣ ದೊಡ್ಡ ಮಕ್ಕಳನ್ನು ಕರೆದುಕೊಂಡು ಎಲ್ಲೋ ಹೋಗಲು ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಮುಜುಗರಕ್ಕೀಡಾದ ಘಟನೆ ನಡೆದಿದೆ.

ರೈಲು ನಿಲ್ದಾಣಗಳಲ್ಲಿ ಎಚ್ಚರಿಕೆ ಮೂಡಿಸಲು ಹಾಗೂ ಜಾಹೀರಾತು ನೀಡುವ ಸಲುವಾಗಿ ದೊಡ್ಡ ದೊಡ್ಡ ಎಲ್‌ಸಿಡಿ ಟಿವಿಗಳನ್ನು ಅಲ್ಲಲ್ಲಿ ಅಳವಡಿಸಲಾಗಿರುತ್ತದೆ. ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಸಿಸಿಟಿವಿಗಳ ಜೊತೆಗೆ ಜಾಹೀರಾತು ಪ್ರಸಾರಕ್ಕಾಗಿ ಟಿವಿಗಳಿರುತ್ತವೆ . ಅದೇ ರೀತಿ ಇಲ್ಲೂ ಕೂಡಟಿವಿ ಇದ್ದು, ಯಾರೋ ಸಿಬ್ಬಂದಿಯ ಅವಾಂತರದಿಂದ ಈ ರೀತಿಯ ನಾಚಿಕೆಗೇಡಿನ ಘಟನೆ ನಡೆದಿದೆ.

ದತ್ತಾ ಕಮ್ಯುನಿಕೇಷನ್ ಎಂಬ ಸಂಸ್ಥೆ ಈ ಟಿವಿಗಳಲ್ಲಿ ಜಾಹೀರಾತು ಪ್ರಸಾರದ ಉಸ್ತುವಾರಿಯನ್ನು ಗುತ್ತಿಗೆ ಪಡೆದಿತ್ತು. ಆ ಸಂಸ್ಥೆಯ ಸಿಬ್ಬಂದಿಯೇ ಈ ಅವಾಂತರವೆಬ್ಬಿಸಿದ್ದಾರೆ. ಇದರ ವಿರುದ್ಧ ಸರ್ಕಾರಿ ರೈಲ್ವೆ ಪೊಲೀಸ್ ಕ್ರಮ ಕೈಗೊಳ್ಳಲು ನಿಧಾನ ಮಾಡಿದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸ್ ಪೋರ್ಟ್‌ ಈ ದತ್ತಾ ಕಮ್ಯುನಿಕೇಷನ್ ಸಂಸ್ಥೆಯನ್ನು ಸಂಪರ್ಕಿಸಿ ಪೋರ್ನ್‌ ಪ್ರಸಾರ ಆಗುತ್ತಿರುವ ವಿಚಾರ ತಿಳಿಸಿದೆ. ನಂತರವಷ್ಟೇ ಸಂಸ್ಥೆ ಅಶ್ಲೀಲ ಚಿತ್ರ ಪ್ರದರ್ಶನವನ್ನು ನಿಲ್ಲಿಸಿದೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳು ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ.

- Advertisement -

Related news

error: Content is protected !!