- Advertisement -
- Advertisement -



ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಶವ ಪ್ಲಾಸ್ಟಿಕ್ ಡ್ರಮ್ ನಲ್ಲಿ ಪತ್ತೆಯಾಗಿದೆ.
ಬೈಯ್ಯಪ್ಪನ ಹಳ್ಳಿ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದ ಬಳಿ ಇರಿಸಲಾಗಿದ್ದ ಪ್ಲಾಸ್ಟಿಕ್ ಡ್ರಮ್ ನಲ್ಲಿ ಮಹಿಳೆ ಶವಪತ್ತೆಯಾಗಿದೆ. ಕೆಲವು ತಿಂಗಳ ಹಿಂದೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇದೇ ರೀತಿ ಮಹಿಳೆಯ ಶವ ಡ್ರಮ್ ನಲ್ಲಿ ಪತ್ತೆಯಾಗಿತ್ತು.
ಮಚಲಿಪಟ್ಟಣದಿಂದ ರೈಲಿನಲ್ಲಿ ಮಹಿಳೆ ಶವ ತರಲಾಗಿದ್ದು, ನಂತರ ಆಟೋದಲ್ಲಿ ಮೂವರು ದುಷ್ಕರ್ಮಿಗಳು ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದ ಬಳಿ ಡ್ರಮ್ ಇರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಪತ್ತೆ ಹಚ್ಚಿದ್ದು, ಇದರ ಜಾಡು ಹಿಡಿದು ತನಿಖೆ ಆರಂಭವಾಗಿದೆ. ಮೃತ ಮಹಿಳೆಯ ವಯಸ್ಸು 30 ರಿಂದ 40 ಆಗಿರಬಹುದು ಎಂದು ಶಂಕಿಸಲಾಗಿದ್ದು , ಗುರುತು ಪತ್ತೆಯಾಗಿಲ್ಲ. ಪೊಲೀಸ್ ತಂಡ ಮಚಲಿಪಟ್ಟಣಕ್ಕೆ ಭೇಟಿ ನೀಡಿದ್ದರೂ ಮಹಿಳೆಯ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ.
- Advertisement -