Friday, May 17, 2024
spot_imgspot_img
spot_imgspot_img

ರೋಟರಿ ಕ್ಲಬ್ ಪುತ್ತೂರು ಸಿಟಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ; ಎಸ್.ಎಲ್.ವಿ ಗ್ರೂಪ್‌ನ ದಿವಾಕರ್ ದಾಸ್ ನೇರ್ಲಾಜೆಯವರಿಗೆ ವೊಕೇಶನಲ್ ಎಕ್ಸಲೆಂಟ್ `ಸಮರ್ಥ’ ಅವಾರ್ಡ್‌

- Advertisement -G L Acharya panikkar
- Advertisement -

ಪುತ್ತೂರು: ರೋಟರಿ ಮುಖಾಂತರ ಯಾವುದೇ ಪ್ರಾಜೆಕ್ಟ್ ಮಾಡೋವಾಗ ಸದಸ್ಯರ ಒಳಗೊಳ್ಳುವಿಕೆ ಇದ್ದಾಗ ಮಾತ್ರ ಯಶಸ್ಸು ಸಾಧ್ಯ. ರೊಟೇರಿಯನ್ಸ್‌ಗಳು ರೋಟರಿ ಫೌಂಡೇಶನ್(ಟಿಆರ್‌ಎಫ್)ಗೆ ನೀಡುವ ದೇಣಿಗೆ ವ್ಯಕ್ತಿಗಲ್ಲ ಬದಲಾಗಿ ಸಮಾಜಸೇವೆ ಚಟುವಟಿಕೆಗಳಿಗೆ ಎಂದು ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ಹೇಳಿದರು.

ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿಗೆ ರೋಟರಿ ಜಿಲ್ಲಾ ಗವರ್ನರ್ ಎ.ಆರ್ `ರವೀಂದ್ರ ಭಟ್‌ರವರು ಡಿ.21ರಂದು ಅಧಿಕೃತ ಭೇಟಿ ನೀಡಿ, ಸಂಜೆ ಸೈನಿಕ್ ಭವನ್ ರಸ್ತೆಯಲ್ಲಿನ ಲಯನ್ಸ್ ಸೇವಾ ಸದನದ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಕ್ಲಬ್ ಹಮ್ಮಿಕೊಂಡ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು.

vtv vitla
vtv vitla

ರೋಟರಿ ಅಸಿಸ್ಟೆಂಟ್ ಗವರ್ನರ್ ಸುರೇಂದ್ರ ಕಿಣಿರವರು ಕ್ಲಬ್‌ನ ಮಾಸ ಪತ್ರಿಕೆ ಡಾ.ಹರಿಕೃಷ್ಣ ಪಾಣಾಜೆ ಸಂಪಾದಕತ್ವದ `ರೋಟ ವಿಕಾಸ’ ಅನ್ನು ಅನಾವರಣಗೊಳಿಸಿ ಮಾತನಾಡಿ, ರೋಟರಿ ವಲಯ ನಾಲ್ಕರಲ್ಲಿ 14 ಕ್ಲಬ್‌ಗಳಿದ್ದು, ಇದರಲ್ಲಿ ಪುತ್ತೂರು ರೋಟರಿ ಸಿಟಿ ಕ್ಲಬ್ ಎಲ್ಲಾ ಕ್ಷೇತ್ರಗಳಲ್ಲಿನ ಸಮಾಜಮುಖಿ ಚಟುವಟಿಕೆಗಳಲ್ಲಿ ಬಹಳ ವೈಬ್ರೆಂಟ್ ಎನಿಸಿದೆ.

ಕಾರಣ ಈ ಕ್ಲಬ್‌ನಲ್ಲಿರುವ ಸದಸ್ಯರ ನಿಸ್ವಾರ್ಥತೆ, ಪಕ್ಷತೆ, ಮಾಜಿ ಅಧ್ಯಕ್ಷರುಗಳು ಹಾಗೂ ಹಿರಿಯ, ಕಿರಿಯ ಸಮಾನ ಮನಸ್ಕ ಚಿಂತನೆ ಆಗಿದೆ. ರೋಟರಿ ಫೌಂಡೇಶನ್‌ಗೆ ನೀಡುವ ದೇಣಿಗೆಯು ಅದೊಂದು ಗೌರವದ ಪ್ರತೀಕವಾಗಿದೆ. ರೋಟರಿ ಸಿಟಿಯು ಪ್ರಸ್ತುತ ಎರಡು ಮೇಜರ್ ಡೋನರ್ ಹಾಗೂ ಟ್ವೆಂಟಿ ಪ್ಲಸ್ ಪಿಎಚ್‌ಎಫ್‌ನ್ನು ಜಿಲ್ಲೆಗೆ ನೀಡಿರುವುದು ಶ್ಲಾಘನೀಯವೇ ಸರಿ ಎಂದರು.

ಕಾರ್ಯಕ್ರಮದ ಯಶಸ್ವಿಯಲ್ಲಿ ದೇಣಿಗೆ ಮೂಲಕ ಸಹಕರಿಸಿದ ರೋಟರಿ ಸದಸ್ಯರಾದ ಡಾ.ಶಶಿಧರ್ ಕಜೆ, ಸುಧಾಕರ್‌ ಶೆಟ್ಟಿ, ಪ್ರಶಾಂತ್ ಶೆಣೈ, ಧರಣಪ್ಪ ಗೌಡ, ಮನೋಹರ್ ಕೆ, ಪದ್ಮನಾಭ ಶೆಟ್ಟಿ, ಜಯಕುಮಾರ್ ರೈ ಎಂ.ಆ‌, ಲಾರೆನ್ಸ್ ಗೊನ್ಸಾಲ್ವಿಸ್, ಅಬ್ದುಲ್ ರಹಿಮಾನ್, ಸ್ವಾತಿ ಮಲ್ಲಾರ, ಕೃಷ್ಣವೇಣಿ ರೈ, ಡೆನ್ನಿಸ್ ಮಸ್ಕರೇನಸ್, ಲೀನಾ ಪಾಸ್, ಆನಂದ ಗೌಡ, ಡಾ.ಹರಿಕೃಷ್ಣ ಪಾಣಾಜೆ.

ದಯಾನಂದ ಕೆ.ಎಸ್, ರಾಮಚಂದ್ರ ಪುಚೇರಿ, ಶಶಿಧರ್ ರೈ, ಆನಂದ ಗೌಡ(ಆರ್.ಟಿ.ಒ), ಜೋನ್ ಕುಟಿನ್ಹಾ, ಹರಿಣಿ ಸತೀಶ್, ಜಬ್ಬಾರ್ ಕೆ.ಎಂ, ಕಾರ್ತಿಕ್ ರೈ, ಜಯಗುರು ಆಚಾರ್, ಕೃಷ್ಣಮೋಹನ್ ಪಿ.ಎಸ್, ಜೆರೋಮಿಯಸ್ ಹಾಗೂ ಪ್ರೆಸ್ಸಿ ಪಾಸ್ ದಂಪತಿ, ಜಿಸ್ಟ್ರೇಶ್ ಸಾವ್‌ಜಾನಿ, ಮಹಮ್ಮದ್ ಸಾದಿಕ್, ಜಯರಾಂ ರೈರವರನ್ನು ಹಾಗೂ ಜನುಮದಿನವನ್ನು ಮತ್ತು ವಿವಾಹ ವಾರ್ಷಿಕೋತ್ಸವನ್ನು ಆಚರಿಸಿದ/ಆಚರಿಸುತ್ತಿರುವ ರೋಟರಿ ಸದಸ್ಯರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

vtv vitla
vtv vitla

ನಿಕಟಪೂರ್ವ ಅಧ್ಯಕ್ಷ ಕೃಷ್ಣಮೋಹನ್ ಪಿ.ಕೆರವರು ಜಿಲ್ಲಾ ಗವರ್ನರ್ ರವೀಂದ್ರ ಭಟ್‌ರವರ ಹಾಗೂ ನ್ಯಾಯವಾದಿ ಮಹೇಶ್ ಕಜೆರವರು ರೋಟರಿ ಸಮರ್ಥ ಪ್ರಶಸ್ತಿ ವಿಜೇತ ದಿವಾಕರ್ ದಾಸ್‌ರವರ ಪರಿಚಯ ಮಾಡಿದರು.

ರೋಟರಿ ಸಿಟಿ ವರ್ಷಂಪ್ರತಿ ಕೊಡಲ್ಪಡುವ ವೊಕೇಶನಲ್ ಎಕ್ಸಲೆಂಟ್ `ಸಮರ್ಥ’ ಅವಾರ್ಡ್‌ನ್ನು 2021-22ನೇ ಸಾಲಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಗೆ ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ದಿ.ರಾಮದಾಸ್ ನೇರ್ಲಾಜೆ ಹಾಗೂ ದಿ.ಸುಂದರಿ ದಂಪತಿ ಪುತ್ರರಾಗಿರುವ ಎಸ್.ಎಲ್.ವಿ ಗ್ರೂಪ್‌ನ ದಿವಾಕರ್ ದಾಸ್ ನೇರ್ಲಾಜೆಯವರಿಗೆ ಪ್ರದಾನ ಮಾಡಿದರು.

ವೃತ್ತಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದು, ತಮ್ಮ ವೃತ್ತಿಯೊಂದಿಗೆ ಅನನ್ಯವಾದ ಅನುಕರಣೀಯ ಸಮಾಜಮುಖಿ ಕಾರ್ಯಗಳನ್ನು ಮಾಡಿದ ರೋಟರಿ ಸದಸ್ಯರಲ್ಲದ ವ್ಯಕ್ತಿಗೆ ಕಳೆದ 10 ವರ್ಷಗಳಿಂದ ರೋಟರಿ ಸಿಟಿಯು ಈ ಅವಾರ್ಡ್‌ನ್ನು ನೀಡುತ್ತಾ ಬಂದಿದೆ. ಅವಾರ್ಡ್ ಸ್ವೀಕರಿಸಿ ಮಾತನಾಡಿದ ದಿವಾಕರ್ ದಾಸ್‌ರವರು ತಾನೂ ಕೂಡ ರೋಟರಿ ಸಂಸ್ಥೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

vtv vitla

ವೇದಿಕೆಯಲ್ಲಿ ಅಧ್ಯಕ್ಷ ಪ್ರಮೋದ್ ಮಲ್ಲಾರರವರ ಪತ್ನಿ ಸ್ವಾತಿ ಮಲ್ಲಾರ, ನಿಯೋಜಿತ ಅಧ್ಯಕ್ಷ ಪ್ರಶಾಂತ್ ಶೆಣೈ, ನಿಕಟಪೂರ್ವ ಅಧ್ಯಕ್ಷ ಕೃಷ್ಣಮೋಹನ್ ಉಪಸ್ಥಿತರಿದ್ದರು. ಕೃಷ್ಣವೇಣಿ ಮುಳಿಯ ಪ್ರಾರ್ಥಿಸಿದರು. ಕ್ಲಬ್ ಸದಸ್ಯರಾದ ಪ್ರೆಸ್ಸಿ ಪಾಸ್, ಶ್ರೀಲತಾ ಶೆಣೈ, ಲೀನಾ ಪಾಸ್, ಪ್ರೆಸ್ಸಿ ಗೊನ್ಸಾಲ್ವಿಸ್, ಶ್ರೀಲಕ್ಷ್ಮೀ ಕಿಣಿಯವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಅಧ್ಯಕ್ಷ ಪ್ರಮೋದ್ ಮಲ್ಲಾರ ಸ್ವಾಗತಿಸಿದರು. ಕಾರ್ಯದರ್ಶಿ ಗುರುರಾಜ್ ಕೆ.ರವರು ವರದಿ ಮಂಡಿಸಿ, ವಂದಿಸಿದರು. ಡಾ.ಹರಿಕೃಷ್ಣ ಪಾಣಾಜೆ ಹಾಗೂ ಶ್ಯಾಮಲಾ ಶೆಟ್ಟಿರವರು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!