Saturday, May 11, 2024
spot_imgspot_img
spot_imgspot_img

“ಲಾಲ್ ಸಿಂಗ್ ಚಡ್ಡ” 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಆಂದ್ರೆ ನಂಬ್ತಿರಾ.!?

- Advertisement -G L Acharya panikkar
- Advertisement -

‘ಲಾಲ್ ಸಿಂಗ್ ಚಡ್ಡ’ ಬಿಡುಗಡೆಯಾದ ಬಳಿಕ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತೆ ಎಂದೇ ಹೇಳಲಾಗಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ದುಬಾರಿ ಕಲೆಕ್ಷನ್ ಮಾಡುವಲ್ಲಿ ಈ ಸಿನಿಮಾ ಸೋತಿದೆ. ಹೀಗಿದ್ದರೂ, ಲಾಲ್ ಸಿಂಗ್ ಚಡ್ಡ ದಾಖಲೆ ಬರೋದ್ರಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಆ ದಾಖಲೆ ಬಗ್ಗೆನೇ ಈಗ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

ಧಾರ್ಮಿಕ ಭಾವನೆಗೆ ಧಕ್ಕೆ, ಸೈನ್ಯಕ್ಕೆ ಅಪಮಾನ ಆರೋಪ ಆಮಿರ್ ಖಾನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ಹಿಂದೆ ಬಿದ್ದಿದೆ. ಆದರೆ ಬಾಲಿವುಡ್ ಮಂದಿಗೆ ಸಮಾಧಾನ ನೀಡುವಂತಹ ಸುದ್ದಿಯೊಂದು ಓಡಾಡುತ್ತಿದೆ. ‘ಲಾಲ್ ಸಿಂಗ್ ಚಡ್ಡ’ 2022ರಲ್ಲಿ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂದು.

ಕಳೆದ ಹಲವು ದಿನಗಳಿಂದ ಬರ್ತಿರೋ ರಿಪೋರ್ಟ್ ನೋಡ್ತಿದ್ರೆ, ‘ಲಾಲ್ ಸಿಂಗ್ ಚಡ್ಡ’ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಅಂತ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಇದು ಸುಳ್ಳು ಇರಬಹುದು ಅಂತ ಅಂದುಕೊಳ್ಳೋರಿಗೇನು ಕಮ್ಮಿಯಿಲ್ಲ. ಆದರೆ, ಈ ಸುದ್ದಿ ಅಕ್ಷರಶ: ನಿಜ. ‘ಲಾಲ್ ಸಿಂಗ್ ಚಡ್ಡ’ ವಿದೇಶದ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ.

‘ಲಾಲ್ ಸಿಂಗ್ ಚಡ್ಡ’ ಭಾರತದಲ್ಲಿ ಸೋಲುಂಡರೂ ವಿದೇಶದಲ್ಲಿ ಖುಷಿ ಕೊಡುವಂತಹ ಗಳಿಕೆ ಕಾಣುತ್ತಿದೆ. ಓವರ್‌ಸೀಸ್ ಬಾಕ್ಸಾಫೀಸ್‌ನಲ್ಲಿ ಎರಡು ವಾರದ ಅಂತ್ಯಕ್ಕೆ ‘ಲಾಲ್ ಸಿಂಗ್ ಚಡ್ಡ’ ಸುಮಾರು 7.5 ಮಿಲಿಯನ್ ಡಾಲರ್‌ನಷ್ಟು ಹಣ ಗಳಿಸಿದೆ. ಅಂದ್ರೆ ಭಾರತದ ಲೆಕ್ಕಾಚಾರದ ಪ್ರಕಾರ, ಸುಮಾರು 59.89 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಬಾಲಿವುಡ್‌ನ ಗಂಗೂಬಾಯಿ, ದಿ ಕಾಶ್ಮೀರ್ ಫೈಲ್ಸ್, ಭುಲ್ ಭುಲಯ್ಯದಂತಹ ಸಿನಿಮಾಗಳನ್ನು ಹಿಂದಿಕ್ಕಿದೆ.

‘ಲಾಲ್ ಸಿಂಗ್ ಚಡ್ಡ’ ಓವರ್‌ಸೀಸ್ ಬಾಕ್ಸಾಫೀಸ್‌ನಲ್ಲಿ 7.5 ಮಿಲಿಯನ್ ಡಾಲರ್ ಗಳಿಸಿದ್ದು, 2022ರ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಗೆ ಸೇರಿದೆ. ಅದಕ್ಕೆ ಬಾಲಿವುಡ್‌ನಲ್ಲಿ ಈ ವಾರ ಹೆಚ್ಚು ಗಳಿಕೆ ಕಂಡ ಟಾಪ್ 5 ಸಿನಿಮಾಗಳ ಪಟ್ಟಿ ಹೀಗಿದೆ. ಲಾಲ್ ಸಿಂಗ್ ಚಡ್ಡ $7.5 ಮಿಲಿಯನ್, ಗಂಗೂಬಾಯಿ $7.47 ಮಿಲಿಯನ್, ಭುಲ್ ಭುಲಯ್ಯ 2 $5.88 ಮಿಲಿಯನ್, ದಿ ಕಾಶ್ಮೀರ್ ಫೈಲ್ಸ್ $5.7 ಮಿಲಿಯನ್, ಜುಗ್ ಜುಗ್ ಜೀಯೊ $4.33 ಮಿಲಿಯನ್.

ಆಮಿರ್ ಖಾನ್ ಸಿನಿಮಾ ‘ಲಾಲ್ ಸಿಂಗ್ ಚಡ್ಡ’ ಪಂಜಾಬ್ ಸೇರಿದಂತೆ ಕೆಲವೆಡೆ ಮಾತ್ರ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ದೆಹಲಿ, ಉತ್ತರ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಪಾಸಿಟಿವ್ ಪ್ರತಿಕ್ರಿಯೆ ನೀಡಿತ್ತು. ಆಗಸ್ಟ್ 22ರಂದು ಈ ಸಿನಿಮಾ 50 ಲಕ್ಷ ಕಲೆಹಾಕಿತ್ತು, ಈ ಮೂಲಕ ‘ಲಾಲ್ ಸಿಂಗ್ ಚಡ್ಡ’ ಇದೂವರೆಗೂ 60 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಎರಡನೇ ವಾರ ಕೇವಲ 6.25 ಕೋಟಿ ರೂ.ಯಷ್ಟೇ ಕಲೆಕ್ಷನ್ ಮಾಡಿದೆ ಅಂತಿದ್ದಾರೆ ಟ್ರೇಡ್ ಅನಲಿಸ್ಟ್.

- Advertisement -

Related news

error: Content is protected !!