Saturday, June 13, 2026
spot_imgspot_img
spot_imgspot_img

ಲೈಂಗಿಕ ಕ್ರಿಯೆಗೆ ಒಪ್ಪದ ಪತ್ನಿಯನ್ನು ಕೊಂದು‌ ಶಿರಾಡಿ ಘಾಟ್ ನಲ್ಲಿ ಎಸೆದ ಪತಿ

- Advertisement -
- Advertisement -

ವಿವಾಹವಾಗಿ 9 ತಿಂಗಳಾದರೂ ಪತ್ನಿ ಲೈಂಗಿಕ ಕ್ರಿಯೆಗೆ ಸಹಕರಿಸುತ್ತಿಲ್ಲ‌ ಎಂದು 28 ವರ್ಷದ ಯುವಕ ಆಕೆಯನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿ ಶವವನ್ನು ಶಿರಾಡಿಗೆ ಎಸೆದು ಬಂದಿರುವ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಮಡಿವಾಳದ ಮಾರುತಿ ಲೇಔಟ್ ನಿವಾಸಿ ಪೃಥ್ವಿರಾಜ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಬಿಹಾರದ ಸೀತಾಮರ್ಹಿ ಮೂಲದ ಈ ದಂಪತಿ 15 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು.

ಪೃಥ್ವಿರಾಜ್ ಆಗಸ್ಟ್ 5ರಂದು ಮಡಿವಾಳ ಪೊಲೀಸ್ ಠಾಣೆಗೆ ಬಂದು ಆಗಸ್ಟ್ 3 ರಿಂದ ತನ್ನ ಹೆಂಡತಿ ಜ್ಯೋತಿ ಕಾಣೆಯಾಗಿದ್ದಾಳೆ ಎಂದು ಹೇಳಿದ್ದನು. ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ‌ ಈತನೇ ಕೊಲೆ‌ ಮಾಡಿರುವುದು ಬಹಿರಂಗವಾಗಿದೆ. ತನಿಖೆ ವೇಳೆ ಒಂಬತ್ತು ತಿಂಗಳ ಹಿಂದೆ ವಿವಾಹವಾದಾಗಿನಿಂದ ತನ್ನ ಪತ್ನಿಯು ತನ್ನೊಂದಿಗೆ ಸೆಕ್ಸ್‌ ಮಾಡಲು ಒಪ್ಪುತ್ತಿಲ್ಲ ಎಂದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

- Advertisement -

Related news

error: Content is protected !!