Saturday, April 27, 2024
spot_imgspot_img
spot_imgspot_img

ವಿಟ್ಲ: ಹಗಲು ದರೋಡೆಗೆ ಮುಂದಾಯಿತಾ RTO.?; ಯೆಲ್ಲೋ ಬೋರ್ಡ್ ವಾಹನಗಳಿಗೆ ರಿಫ್ಲೆಕ್ಟಿಂಗ್‌ ಸ್ಟಿಕ್ಕರ್ ಅಳವಡಿಕೆ ಬಗ್ಗೆ ವಾಹನ ಚಾಲಕರಿಂದ ಆಕ್ರೋಶ

- Advertisement -G L Acharya panikkar
- Advertisement -

ವಿಟ್ಲ: ವಾಹನದ ಅರ್ಹತಾ ಪತ್ರ ನೀಡಿಕೆ ಹಾಗೂ ನವೀಕರಣ ಸಂದರ್ಭದಲ್ಲಿ ಕೇಂದ್ರ ಮೋಟಾರು ವಾಹನಗಳ ನಿಯಮದಂತೆ ಎಫ್.ಸಿ ಮತ್ತು ಸ್ಟಿಕ್ಕರ್ ಅಳವಡಿಕೆಯ ಬಗ್ಗೆ ಟೆಂಪೊ ಮತ್ತು ಪಿಕಪ್ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.

ವಿಟ್ಲ ಪರಿಸರದ ವಾಹನದ ಅರ್ಹತಾ ಪತ್ರ ನೀಡಿಕೆ ಹಾಗೂ ನವೀಕರಣಕ್ಕಾಗಿ ಮೆಲ್ಕಾರ್‌ನಿಂದ ಆರ್‌ಟಿಒ ಅಧಿಕಾರಿಗಳು ಬಂದು ಪ್ರಾಮಾಣಿಕ ಸೇವೆಯನ್ನು ಮಾಡಿಕೊಂಡು ಬಂದಿರುವುದು ವಿಟ್ಲ ಪರಿಸರದ ಜನರಲ್ಲಿ ಸಂತಸವನ್ನು ತಂದಿದೆ. ಆದರೆ ಇದೀಗ ಸರಕಾರ ತಂದ ಹೊಸ ನಿಯಮದಿಂದಾಗಿ ಜನರಲ್ಲಿ ಗೊಂದಲ ಉಂಟಾಗಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಪಿಕಪ್ ಮತ್ತು ಟೆಂಪೋ ವಾಹನ ಚಾಲಕರು ಎಫ್.ಸಿ ಪಡೆಯಲು ಸ್ಟಿಕ್ಕರ್‌ಗಳನ್ನು ಅಳವಡಿಸಿದ್ದು ಇದೀಗ ವಾಹನದ ಅರ್ಹತಾ ಪತ್ರ ನೀಡಿಕೆ ಹಾಗೂ ನವೀಕರಣ ಸಂದರ್ಭದಲ್ಲಿ ಆರ್‌ಟಿಒ ಏಜೆನ್ಸಿಗಳು ಸುಮಾರು 6 ಏಜೆನ್ಸಿ ಕಂಪೆನಿಗಳ ಮೂಲಕ ಹೊಸದಾಗಿ ಎಫ್.ಸಿ ಮತ್ತು ಸ್ಟಿಕ್ಕರ್‌ಗಳ ಅಳವಡಿಸುವಿಕೆ ಕಡ್ಡಾಯ ಕ್ರಮಗಳನ್ನು ಜಾರಿಗೊಳಿಸಿರುವ ವಿಚಾರ ಸಾರ್ವಜನಿಕರನ್ನು ಇನ್ನಷ್ಟು ಕೆಣಕಿದೆ.

ಬೆನಕ ಏಜೆನ್ಸಿ ಕಂಪೆನಿಯವರು ವಿಟ್ಲದಲ್ಲಿ ಎಫ್.ಸಿ ಮತ್ತು ಸ್ಟಿಕ್ಕರ್‌ಗಳನ್ನು ಪಿಕಪ್ ಮತ್ತು ಟೆಂಪೋ ವಾಹನಗಳಿಗೆ ಆಳವಡಿಸಿದ್ದು, ಮೀಟರ್ ಮುಖಾಂತರ ಇವುಗಳ ದರವನ್ನು ನಿಗದಿಪಡಿಸಿದ್ದಾರೆ. ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ಆರ್‌ಟಿಒ ಏಜೆನ್ಸಿಗಳು ವಾಹನ ಚಾಲಕರು ಈ ಹಿಂದೆ ತಮ್ಮ ವಾಹನಗಳಿಗೆ ಸ್ಟಿಕ್ಕರ್ ಅಳವಡಿಸಿದಿದ್ದರೂ ಪರವಾಗಿಲ್ಲ, ಇದೀಗ ಸರಕಾರದ ಆದೇಶದಂತೆ ಹೊಸ ಸ್ಟಿಕ್ಕರ್‌ಗಳನ್ನು ಸರಕಾರ ನೀಡುವ ಏಜೆನ್ಸಿಗಳಿಂದ ತೆಗೆದುಕೊಂಡು ಬಿಲ್ ಪಾವತಿಸಿ ಸರ್ಟಿಫಕೇಟ್ ಪಡೆದುಕೊಂಡರೆ ಮಾತ್ರ ವಾಹನಗಳ ಎಫ್.ಸಿ ದಾಖಲೆಗಳನ್ನು ನೀಡುವ ವಿಚಾರ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ಅದಲ್ಲದೆ ಸರಕಾರ ನೀಡುವ ಏಜೆನ್ಸಿಗಳೊಂದಿಗೆ ಮಾತ್ರ ವಾಹನ ಚಾಲಕರು ಎಫ್.ಸಿ ಮತ್ತು ಸ್ಟಿಕ್ಕರ್‌ಗಳನ್ನು ಅಳವಡಿಸಿಕೊಳ್ಳಬೇಕು ಹೊರಗಡೆ ಎಲ್ಲಿಯೂ ಮಾಡಿಸುವಂತಿಲ್ಲ ಎಂಬುವುದು ಇವರ ನಿಯಮ.

ಈ ಹಿಂದೆ ನಾವೆಲ್ಲ 800 ರಷ್ಟು ಹಣವನ್ನು ನೀಡಿ ನಮ್ಮ ಗಾಡಿಗಳಿಗೆ ಎಫ್.ಸಿ ಮತ್ತು ಸ್ಟಿಕ್ಕರ್‌ಗಳ ದಾಖಲೆಯನ್ನು ಮಾಡಿಕೊಂಡಿರುತ್ತೇವೆ, ಆದರೆ ಇದೀಗ ಹೊಸ ಜಾರಿಯಿಂದಾಗಿ ಸರಕಾರದ ಕಂಪೆನಿಗಳ ಏಜೆನ್ಸಿಗಳು ಅತೀ ಹೆಚ್ಚು ಹಣವನ್ನು ಕೇಳಿ ಮತ್ತೆ ಅದೇ ಸ್ಟಿಕ್ಕರ್‌ಗಳನ್ನು ನಮ್ಮ ಗಾಡಿಗೆ ಅಳವಡಿಸುತ್ತಿದ್ದಾರೆ. ಈ ಬಗ್ಗೆ ನಮ್ಮಲ್ಲೇ ಗೊಂದಲ ಸೃಷ್ಟಿಯಾಗಿದೆ, ಈ ಸರಕಾರದ ನಿಯಮವನ್ನು ಕೇಳೋರು, ಪ್ರಶ್ನಿಸೋರು ಯಾರೂ ಇಲ್ಲದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈ ನಿಯಮವನ್ನು ಮರು ಹಿಂದಕ್ಕೆ ಪಡೆದುಕೊಳ್ಳಬೇಕೆಂದು” ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!