Sunday, July 6, 2025
spot_imgspot_img
spot_imgspot_img

ವಾಟ್ಸಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ರಾಜೀನಾಮೆ

- Advertisement -
- Advertisement -

ನವದೆಹಲಿ: ವಾಟ್ಸಾಪ್‌ನ ಭಾರತದ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಸಾರ್ವಜನಿಕ ನೀತಿ ಮೆಟಾ ಇಂಡಿಯಾದ ನಿರ್ದೇಶಕ ರಾಜೀವ್ ಅಗರ್ವಾಲ್ ತಮ್ಮ ಸ್ಥಾನಗಳಿಗೆ ಇಂದು ರಾಜೀನಾಮೆ ನೀಡಿದ್ದಾರೆ.

ಇನ್ನು ಇವರಿಬ್ಬರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಹೊಸ ನೇಮಕಾತಿಯೂ ನಡೆದಿದ್ದು, ಭಾರತದಲ್ಲಿ ವಾಟ್ಸಾಪ್ ಸಾರ್ವಜನಿಕ ನೀತಿಯ ನಿರ್ದೇಶಕರಾಗಿದ್ದ ಶಿವನಾಥ್ ತುಕ್ರಾಲ್ ಅವರನ್ನು ಭಾರತದ ಎಲ್ಲಾ ಮೆಟಾ ಬ್ರಾಂಡ್‌ಗಳ ಸಾರ್ವಜನಿಕ ನೀತಿಯ ನಿರ್ದೇಶಕರನ್ನಾಗಿ ನೇಮಕಗೊಳಿಸಿ ಆದೇಶಿಸಲಾಗಿದೆ.

ಪ್ರಪಂಚದಾದ್ಯಂತ ಸುಮಾರು 11,000 ಉದ್ಯೋಗಿಗಳನ್ನು ಮೆಟಾ ಸಂಸ್ಥೆ ಉದ್ಯೋಗದಿಂದ ತೆಗೆದು ಹಾಕಿತ್ತು. ಅಲ್ಲದೆ ಉನ್ನತ ಹುದ್ದೆಯಲ್ಲಿರುವವರನ್ನೂ ವಜಾ ಮಾಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಇಬ್ಬರು ಉನ್ನತ ಸ್ಥಾನದ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಭಾರತದಲ್ಲಿ ಮೆಟಾ ಮುಖ್ಯಸ್ಥರಾಗಿದ್ದ ಅಜಿತ್ ಮೋಹನ್ ಅವರು ಕಳೆದ ಕೆಲ ದಿನಗಳ ಹಿಂದಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು.

- Advertisement -

Related news

error: Content is protected !!