Sunday, May 19, 2024
spot_imgspot_img
spot_imgspot_img

ವಾಹನದಾರರಿಗೆ ಅಲರ್ಟ್​​; ಕಾರ್​​​ಗಳಲ್ಲಿರೋ ಏರ್​​ಬ್ಯಾಗ್ ಕುರಿತು ಮೋದಿ ಸರ್ಕಾರ ಮಹತ್ವದ ನಿರ್ಧಾರ

- Advertisement -G L Acharya panikkar
- Advertisement -
suvarna gold

ಕಾರ್​ಗಳಲ್ಲಿ ಏರ್​ಬ್ಯಾಗ್​ ವಿಚಾರವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದು ಕೊಂಡಿದೆ. ಕಾರ್​ಗಳಲ್ಲಿನ ಏರ್​ಬ್ಯಾಗ್​ ವಿಚಾರವಾಗಿ ಇನ್ಮುಂದೆ ಹೊಸ ನಿಯಮ ಜಾರಿಗೊಳಿಸಿ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ನಿರ್ಧಾರ ಕೈಗೊಂಡಿರುವ ಸಚಿವರು, ಕಾರ್​ಗಳಲ್ಲಿ ಕೇವಲ ಮುಂದಿನ 2 ಸೀಟ್​ಗಳಲ್ಲಿ ಮಾತ್ರ ಏರ್​ಬ್ಯಾಗ್​ ಇತ್ತು. ಆದ್ರೆ ಇನ್ಮುಂದೆ ಹೊಸ ನಿಯಮವನ್ನು ಪಾಲಿಸಬೇಕೆಂದು ಸಾರಿಗೆ ಸಚಿವರು ಸೂಚಿಸಿದ್ದಾರೆ.

vtv vitla
vtv vitla

ಏನದು ಹೊಸ ನಿಯಮ..?

ಬಹಳಷ್ಟು ಕಾರುಗಳು 8 ಜನ ಪ್ರಯಾಣಿಕರನ್ನು ಹೊರುವ ಸಾಮರ್ಥ್ಯ ಹೊಂದಿರುತ್ತದೆ. ಆದರೂ ಕೇವಲ ಮುಂಬದಿಯ 2 ಸೀಟ್​ಗಳಲ್ಲಿ ಮಾತ್ರವೇ ಏರ್​ಬ್ಯಾಗ್​ ಇರುತ್ತದೆ. ಇದರಿಂದ ಪ್ರಯಾಣಿಕರಿಗೆ ಸುರಕ್ಷತೆ ಇರುವುದಿಲ್ಲ, ಆದ ಕಾರಣ 8 ಜನ ​ಪ್ರಯಾಣಿಕರು ಪ್ರಯಾಣಿಸುವ ಸಾಮರ್ಥ್ಯ ಹೊಂದಿರುವ ವಾಹನಗಳಲ್ಲಿ 6 ಏರ್​ಬ್ಯಾಗ್​ಗಳು ಕಡ್ಡಾಯವಾಗಿ ಇರಲೇಬೇಕು ಎಂಬ ನಿಯಮಗಳನ್ನು ಜಾರಿಗೊಳಿಸಿದ್ದಾರೆ.

2 ಏರ್​ಬ್ಯಾಗ್​ಗಳು ಎಂದಿನಂತೆ ಮುಂಬದಿಯಲ್ಲಿರುತ್ತದೆ. 4 ಏರ್​ಬ್ಯಾಗ್​ ಹಿಂಬದಿ ಕೂರುವ ಪ್ರಯಾಣಿಕರ ಪಕ್ಕದಲ್ಲಿರುತ್ತದೆ. ಅಂದರೇ ಎಡ ಭಾಗದಲ್ಲಿ 2 ಏರ್​ಬ್ಯಾಗ್​ ಹಾಗೂ ಬಲಭಾಗಲ್ಲಿ 2 ಏರ್​ಬ್ಯಾಗ್ ಇರಬೇಕು ಎಂದು ಸೂಚಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಯ ಸಲುವಾಗಿ ಈ ಹೊಸ ನಿಯಮಗಳನ್ನು ಕೇಂದ್ರ ಸಾರಿಗೆ ಸಚಿವರು ಜಾರಿಗೊಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!