Thursday, May 16, 2024
spot_imgspot_img
spot_imgspot_img

ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಪ್ರಕಟಿಸಿದ ಹೈಕೋರ್ಟ್

- Advertisement -G L Acharya panikkar
- Advertisement -
driving

ಬೆಂಗಳೂರು: 1998ರಲ್ಲಿ ಬೆಂಗಳೂರಿನ ಜಯಶ್ರೀ ಎಂಬಾಕೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ವಿಕೃತಿಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆ ತೀರ್ಪನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆಗೆ ಉಮೇಶ್ ರೆಡ್ಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದನು. ಇದೀಗ ಕರ್ನಾಟಕ ಹೈಕೋರ್ಟ್ ಉಮೇಶ್ ರೆಡ್ಡಿ ಅರ್ಜಿಯನ್ನು ವಜಾಗೊಳಿಸಿ ಗಲ್ಲು ಶಿಕ್ಷೆ ತೀರ್ಪು ನೀಡಿದೆ.

ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವಂತೆ ಉಮೇಶ್ ರೆಡ್ಡಿ ಸುಪ್ರೀಂಕೋರ್ಟ್ ಗೂ ಮನವಿ ಸಲ್ಲಿಸಿದ್ದ. ಸುಪ್ರೀಂಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಆದೇಶ ಎತ್ತಿ ಹಿಡಿದಿತ್ತು. ಆ ಬಳಿಕ 2013ರಲ್ಲಿ ರಾಷ್ಟ್ರಪತಿ ಅವರಿಗೂ ಕ್ಷಮಾಧಾನ ಕೋರಿ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ಪರೀಕ್ಷಿಸಿದ ರಾಷ್ಟ್ರಪತಿ ಕೂಡ ಉಮೇಶ್ ರೆಡ್ಡಿ ಅರ್ಜಿ ವಜಾಗೊಳಿಸಿದ್ದರು. ನಂತರ ಸುಪ್ರೀಂಕೋರ್ಟ್ ಅರ್ಜಿಯನ್ನು ಹೈಕೋರ್ಟ್‍ಗೆ ವರ್ಗಾಯಿಸಿತ್ತು.

ಕ್ಷಮಾಧಾನ ವಿಲೇವಾರಿಯಲ್ಲಿ ತಡವಾಗಿದ್ದ ಹಿನ್ನೆಲೆ ಹೈಕೋರ್ಟ್ ಮೊರೆ ಹೋಗಿದ್ದ ಉಮೇಶ್ ರೆಡ್ಡಿ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾ.ಅರವಿಂದ್ ಕುಮಾರ್, ನ್ಯಾ. ಪ್ರದೀಪ್ ಸಿಂಗ್ ಯೆರೂರ್ ರವರ ದ್ವಿಸದಸ್ಯ ಪೀಠ ಗಲ್ಲು ಶಿಕ್ಷೆಯಿಂದ ವಿನಾಯಿತಿ ಕೋರಿದ್ದ ಉಮೇಶ್ ರೆಡ್ಡಿ ಅರ್ಜಿ ವಜಾಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಸದ್ಯ ಈತ ಬೆಳಗಾವಿಯ ಹಿಂಡಲಗ ಜೈಲಿನಲ್ಲಿದ್ದು, ಈತನ ಮೇಲೆ 21 ಮಹಿಳೆಯರ ಮೇಲೆ ಅತ್ಯಾಚಾರ ಕೊಲೆ ಕೇಸ್ ಇದೆ. 21ರಲ್ಲಿ 9 ಕೇಸ್‍ನಲ್ಲಿ ಈತ ದೋಷಿ ಎಂದು ಸಾಬೀತಾಗಿದೆ

- Advertisement -

Related news

error: Content is protected !!