Saturday, April 20, 2024
spot_imgspot_img
spot_imgspot_img

ವಿಟ್ಲದ ಮುಸ್ಲಿಂ ಯುವಕನ ಲವ್ ಜಿಹಾದ್’ನ ಬಲೆಗೆ ಬಿದ್ದ ಹಿಂದೂ ಯುವತಿ..! ವಿವಾಹವಾದ ಪತ್ರ ವೈರಲ್…?!

- Advertisement -G L Acharya panikkar
- Advertisement -

ವಿಟ್ಲ ಮೂಲದ ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯನ್ನು ವಿವಾಹವಾದ ಘಟನೆ ನಡೆದಿದ್ದು ಈ ಬಗ್ಗೆ ರಿಜಿಸ್ಟಾರ್ ಮಾಡಿದ ಫೋಟೋ ವೈರಲ್ ಆಗುತ್ತಿದೆ. ವಿಟ್ಲ ನೀರಕಣಿ ಮಾರ್ನೆಮಿಗುಡ್ಡೆ ನಿವಾಸಿ ಉಬೈದ್(27) ಎಂಬಾತ ಮೈಸೂರು ಲೋಕನಾಯಕನ ನಗರದ ಸೌಂದರ್ಯ(24) ಎಂಬ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ.

ಉಬೈದ್ ಮತ್ತು ಸೌಂದರ್ಯ ಮೈಸೂರಿನಲ್ಲಿ ರಿಜಿಸ್ಟರ್ ವಿವಾಹವಾಗಿದ್ದು, ಅವರ ಮದುವೆಯ ರಿಜಿಸ್ಟರ್ ಪತ್ರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಜೋಡಿ ಕೆಲ ದಿನ ಹಿಂದೆ ವಿಟ್ಲದಲ್ಲಿ ತಿರುಗಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಕೇರಳದಲ್ಲಿ ನಿಶ್ಚಿತಾರ್ಥವಾದ ಈ ಭಿನ್ನಕೋಮಿನ ಜೋಡಿ ಮೈಸೂರಿನ ರೆಜಿಸ್ಟರ್ ಆಫೀಸ್ ನಲ್ಲಿ ವಿವಾಹವಾಗಿದೆ ಎಂದು ತಿಳಿದು ಬಂದಿದೆ.

ಯುವತಿಯ ಮನೆಯವರ ಒಪ್ಪಿಗೆ ಮೇರೆಗೆ ಈ ವಿವಾಹ ನಡೆದಿದೆ ಎಂಬ ಮಾಹಿತಿಯೂ ಕೂಡ ಲಭ್ಯವಾಗಿದೆ. ಈ ಬಗ್ಗೆ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ವ್ಯವಸ್ಥಿತ ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ.

- Advertisement -

Related news

error: Content is protected !!