Monday, April 29, 2024
spot_imgspot_img
spot_imgspot_img

ವಿಟ್ಲ: ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಇರಿಸಿದ್ದ ದಸ್ತಾನಿಗೆ ಪೊಲೀಸರಿಂದ ದಾಳಿ; ಸಾವಿರಾರು ಮೌಲ್ಯದ ಜಿಲೆಟಿನ್ ಕಡ್ಡಿಗಳು ವಿಟ್ಲ ಪೋಲೀಸರ ವಶಕ್ಕೆ..!

- Advertisement -G L Acharya panikkar
- Advertisement -

ವಿಟ್ಲ: ಅಕ್ರಮವಾಗಿ ಇರಿಸಿದ್ದ ಸ್ಪೋಟಕ ವಸ್ತುಗಳ ದಸ್ತಾನಿಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸಾವಿರಾರು ಮೌಲ್ಯದ ಜಿಲೆಟಿನ್‌ ಕಡ್ಡಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಎರ್ಮೆತೊಟ್ಟಿ ಎಂಬಲ್ಲಿ ನಡೆದಿದೆ.

ವಿಟ್ಲ ಠಾಣಾ ಪಿಎಸ್ಐ ಸಂದೀಪ್‌ ಕುಮಾರ್‌ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ 496 ಪ್ರಸನ್ನ, ಹೆಚ್.ಸಿ 1957 ಜಯಕುಮಾರ್‌ ಪಿ.ಸಿ 2487 ಹೇಮರಾಜ್‌ ರವರೊಂದಿಗೆ ಉಕ್ಕುಡ, ಕೇಪು ,ಅಡ್ಯನಡ್ಕ ಮುಂತಾದ ಕಡೆಗಳಲ್ಲಿ ರೌಂಡ್ಸ್‌ ಕರ್ತವ್ಯ ನಿರ್ವಹಿಸಿ ಸಾರಡ್ಕ ಚೆಕ್‌ ಪೋಸ್ಟ್‌ ಬಳಿ ಇರುವ ವೇಳೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಎರ್ಮೆತೊಟ್ಟಿ ಎಂಬಲ್ಲಿ ಕೊರೆಯ ವಠಾರದಲ್ಲಿ ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ದಾಸ್ತಾನು ಇರಿಸಿದ ಬಗ್ಗೆ ಬಂದ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಹುಡುಕಾಡಿದಾಗ ಒಂದು ಖಾಲಿ ಮನೆಯ ಬಳಿಯ ಪೊದೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ಸ್ಪೋಟಕ ವಸ್ತು ಜಿಲೆಟಿನ್‌ ಕಡ್ಡಿಗಳನ್ನು ತುಂಬಿಸಿಟ್ಟಿರುವುದು ಕಂಡುಬಂದಿದೆ.

ಸ್ಪೋಟಕ ವಸ್ತು ತುಂಬಿಸಿಟ್ಟ ಸ್ಥಳದ ಪಕ್ಕದ ಮನೆಯಲ್ಲಿದ್ದ ದೇವಪ್ಪ ನಾಯ್ಕ ಎಂಬವರನ್ನು ಕರೆದು ವಿಚಾರಿಸಿದಾಗ ಜಮೀನು ತನಗೆ ಸಂಬಂಧಿಸಿರುವುದಾಗಿಯೂ ಈ ಜಮೀನಿನ ಬಳಿಯಿರುವ ಕಪ್ಪು ಕಲ್ಲು ಕೋರೆಯ ಕಲ್ಲುಗಳನ್ನು ಸ್ಪೋಟಕ ಬಳಸಿ ಒಡೆಯುವ ಉದ್ದೇಶದಿಂದ ಕೋರೆಯ ಮಾಲಕ ಮಹಮ್ಮದ್‌ ಕುಂಞಿ ಹಾಗೂ ಬ್ಲಾಸ್ಟರ್‌ ಅಶೋಕ್‌ ರವರು ಒಟ್ಟಾಗಿ ಸೇರಿಕೊಂಡು ಸ್ಪೋಟಕ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಪಂಚಾಯತುದಾರರ ಸಮಕ್ಷಮದಲ್ಲಿ ಸ್ಥಳವನ್ನು ಪರಿಶೀಲಿಸಿ APEX POWER-90,Explosives(Classs-2) 25mmX125 gms, Manufactured by-A.P Explosives Private Limited ಎಂಬುದಾಗಿ ಬರೆದಿರುವ ಸುಮಾರು 6120 ಮೌಲ್ಯದ ಜಿಲೆಟಿನ್‌ ಜೆಲ್‌ ನ 510 ಕಡ್ಡಿಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.

- Advertisement -

Related news

error: Content is protected !!