Thursday, April 25, 2024
spot_imgspot_img
spot_imgspot_img

ವಿಟ್ಲ: ಅಡ್ಯನಡ್ಕ ವಾರಣಾಸಿ ಫಾರ್ಮ್‌ನ ಕೆರೆಗೆ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ವೈದ್ಯೆ ಮೃತ್ಯು

- Advertisement -G L Acharya panikkar
- Advertisement -

ವಿಟ್ಲ: ಅಡ್ಯನಡ್ಕ ವಾರಣಾಸಿ ಫಾರ್ಮ್‌ಗೆ ಅತಿಥಿಯಾಗಿ ಬಂದ ಮಹಿಳೆಯೊಬ್ಬಳು ಏಕಾಂಗಿಯಾಗಿ ಸಾಹಸಕ್ರೀಡೆಗಳನ್ನು ಆಡುವ ಕೆರೆಗೆ ಬಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇದೀಗ ತಿಳಿದು ಬಂದಿದೆ.

ಮೃತಪಟ್ಟ ಮಹಿಳೆಯನ್ನು ಮಂಗಳೂರು ಮೂಲದ ವೈದ್ಯೆ ನೇಝೀ ಫೆರ್ನಾಂಡೀಸ್ (32) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಫಾರ್ಮ್ ಗೆ ಆಗಮಿಸಿದ ಈಕೆ ಕೆರೆಯ ಸಮೀಪಕ್ಕೆ ಒಂಟಿಯಾಗಿ ಹೋಗಿದ್ದಾರೆನ್ನಲಾಗಿದೆ. ಸಮಯವಾದರೂ ಬಾರದ ಸಂದರ್ಭ ಕೆರೆಯಲ್ಲಿ ಹುಡುಕಾಡಿ ನೀರಿನಡಿಗೆ ಹೋಗಿದ್ದ ಈಕೆಯ ದೇಹವನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಟ್ಲ ಪೊಲೀಸ್ ನಿರೀಕ್ಷಕ ನಾಗರಾಜ್ ಎಚ್. ಇ. ಅವರ ತಂಡ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೂರು ಬಾರದ ಹಿನ್ನಲೆಯಲ್ಲಿ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.

ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ನೇಝೀ ಫೆರ್ನಾಂಡೀಸ್ ಕೃಷಿ ಬಗ್ಗೆ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ವಾರಣಾಸಿ ಪಾರ್ಮ್ ಗೆ ಕೆಲವು ದಿನಗಳ ಹಿಂದೆಯೂ ಆಗಮಿಸಿದ್ದರು. ಎರಡು ದಿನ ಊರಿಗೆ ಹೋಗಿ ಮತ್ತೆ ಬಂದು ಇಲ್ಲೇ ವಾಸ್ತವ್ಯ ನಡೆಸುತ್ತಿದ್ದರು.

ಕೊಳದಲ್ಲಿ ಶೋಧ!
ಮಹಿಳೆ ಒಬ್ಬಂಟಿಯಾಗಿ ಬಂದು ಬಟ್ಟೆ ಹಾಗೂ ಪಾದರಕ್ಷೆಯನ್ನು ಕಟ್ಟೆಯ ಮೇಲೆ ಇಟ್ಟು ಕೆರೆಯಲ್ಲಿ ನೀರಿನಾಟಕ್ಕೆ ಇಳಿದಳೇ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮರಳಿ ಬಾರದ ಸಂದರ್ಭ ಇವರು ಕೆರೆಯ ಕಡೆಗೆ ಹೋಗುವುದನ್ನು ಗಮನಿಸಿದ ಈಜು ಕಲಿಯುವ ವಿದ್ಯಾರ್ಥಿಗಳು ಕೆರೆಯ ಬಳಿ ಬಂದು ಕೆರೆಯಲ್ಲಿ ಹುಡುಕಾಡಿದಾಗ ದೇಹ ಪತ್ತೆಯಾಗಿದೆ.

ಬಾಲಕನನ್ನೂ ನುಂಗಿತ್ತು ಈಜುಕೊಳ.!
ಪ್ರವಾಸಿಗರನ್ನು ಸೆಳೆಯುವುದಕ್ಕಾಗಿ ನಿರ್ಮಿಸಿದ ಈಜುಕೊಳದಲ್ಲಿ ಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತದೆ. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಕೂಡಾ ಇಲ್ಲಿಗೆ ಬಂದು ಮೋಜು, ಮಸ್ತಿಯಲ್ಲಿ ಹಾಯಾಗಿರುತ್ತಾರೆಂಬ ಆರೋಪ ಸ್ಥಳೀಯರು ಮಾಡುತ್ತಿದ್ದಾರೆ. ಈ ಹಿಂದೆ ಬಾಲಕನೊಬ್ಬ ಇದೇ ಕೆರೆಯಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದ್ದರೂ ಮಾಲಿಕರಾಗಲೀ ಅಧಿಕಾರಿಗಳಾಗಲೀ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

- Advertisement -

Related news

error: Content is protected !!