Thursday, April 25, 2024
spot_imgspot_img
spot_imgspot_img

ವಿಟ್ಲ: ಅ. 11 ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ಸದನದಲ್ಲಿ 50 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ

- Advertisement -G L Acharya panikkar
- Advertisement -

ಶ್ರೀ ದೇವತಾ ಸಮಿತಿ ವಿಟ್ಲ ಇದರ ಆಶ್ರಯದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ನಾಳೆ. ಅ. 11 ರಂದು ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪೂರ್ವಾಹ್ನ ಘಂಟೆ 7:30ಕ್ಕೆ: ಶ್ರೀ ಮಹಾಗಣಪತಿ ಹವನ ನಡೆಯಲಿದ್ದು ಘಂಟೆ 9.00ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಟೆ ವೇದಮೂರ್ತಿ ಎಮ್ ವಿಕಾಸ್ ಭಟ್, ಅರ್ಚಕರು, ಶ್ರೀರಾಮ ಮಂದಿರ ವಿಟ್ಲ ಇವರು ನಡೆಸಿಕೊಡಲಿದ್ದಾರೆ. ಧ್ವಜಾರೋಹಣವನ್ನು ಎಂ. ರಾಧಾಕೃಷ್ಣ ನಾಯಕ, ಅಧ್ಯಕ್ಷರು ಶ್ರೀ ದೇವತಾ ಸಮಿತಿ, ವಿಟ್ಲ ಇವರು ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅನಂತೇಶ್ವರ ದೇವಸ್ಥಾನ ನಿವೃತ ಪ್ರಧಾನ ಅರ್ಚಕ ವಿಜಯ ಕುಮಾರ್ ಭಟ್ ನೆರವೇರಿಸಲಿದ್ದಾರೆ. ಅಧ್ಯಕ್ಷೆತೆಯನ್ನು ವಿಟ್ಲ ಅರಮನೆಯ ಬಂಗಾರು ಅರಸರು, ಮುಖ್ಯ ಅತಿಥಿಯಾಗಿ ಲಯನ್ಸ್ ಕ್ಲಬ್, ವಿಟ್ಲ ಇದರ ಅಧ್ಯಕ್ಷ ಕೆ ಮೋನಪ್ಪ ಗೌಡ ವಹಿಸಲಿದ್ದಾರೆ.

10.30: ಅಕ್ಷರ ಅಭ್ಯಾಸ
1 ಗಂಟೆಗೆ: ಮಹಾಪೂಜೆ
3 ಗಂಟೆಗೆ: ಡಾ| ಪಿ. ಕೆ. ದಾಮೋದರ್ ಪುತ್ತೂರು ಮತ್ತು ಬಳಗ ಇವರಿಂದ ವಾದ್ಯಗೋಷ್ಠಿ
4 ಗಂಟೆಗೆ : ಭಜನಾಮೃತ – ವಿಜಯಕುಮಾರ್ ಭಟ್ ಮತ್ತು ಬಳಗ ಶ್ರೀ ಸಾರಸ್ವತ ಭಜನ ಮಂಡಳಿ, ವಿಟ್ಲ
5 ಗಂಟೆಗೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಪಂಚಲಿಂಗೇಶ್ವರ ಸದನಕ್ಕೆ ನಗರ ಭಜನೆ ನಡೆಯಲಿದೆ.
5.30 : ಸಾಮೂಹಿಕ ರಂಗಪೂಜೆ
6.30: ರಾತ್ರಿ ಪೂಜೆ
7.30: ವಿಸರ್ಜನಾ ಪೂಜೆ
ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಸಂತ ಮಂಟಪದ ಎದುರಿನ ಕೆರೆಯಲ್ಲಿ ಜಲಸ್ತಂಭನ

- Advertisement -

Related news

error: Content is protected !!