Sunday, May 19, 2024
spot_imgspot_img
spot_imgspot_img

ವಿಟ್ಲ: ಅ.14ರಂದು ಶ್ರೀ ಉಳ್ಳಾಲ್ದಿ ಅಮ್ಮ, ಶ್ರೀಮಲರಾಯ ಮೂಲ ಭಂಡಾರ ಚಾವಡಿ ಬೆಂಜನಮಾರ್ ಗುತ್ತು ಶ್ರೀ ದೈವಗಳಿಗೆ ನವರಾತ್ರಿ ಪರ್ವ ಪೂಜೆ, ತಂಬಿಲ ಸೇವೆ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಉಳ್ಳಾಲ್ದಿ ಅಮ್ಮ, ಶ್ರೀ ಮಲರಾಯ ಮೂಲ ಭಂಡಾರ ಚಾವಡಿ ಬೆಂಞತ್ತಿಮಾರ್ ಗುತ್ತು ಅ.14ರ ಗುರುವಾರದ ನವಮಿಯಂದು ಚಾವಡಿಯಲ್ಲಿ ಶ್ರೀ ದೈವಗಳಿಗೆ ನವರಾತ್ರಿ ಪರ್ವ ಪೂಜೆ ಹಾಗೂ ತಂಬಿಲ ಸೇವೆಗಳು ನಡೆಯಲಿದೆ.

ಬೆಳಿಗ್ಗೆ- 9:30ಕ್ಕೆ ತೆನೆ ತುಂಬಿಸುವುದು (ತೆನೆ ಪೂಜೆ), ಸಂಜೆ 6:00 ರಿಂದ ಶ್ರೀ ಉಮಾಮೇಶ್ವರ ಭಜನಾ ಮಂಡಳಿ ಮಾಮೇಶ್ವರ, ಶ್ರೀ ಕೆಲಿಂಜೇಶ್ವರಿ ಭಜನಾ ಮಂಡಳಿ ಕೆಲಿಂಜ, ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8:30 ಕ್ಕೆ ತಂಬಿಲ ಸೇವೆ, ಕರ್ಪೂರಾರತಿ ಕುಂಕುಮಾರ್ಚನೆ, ಹೂವಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆಯು ಜರಗಲಿರುವುದು.

ಬಳಿಕ ದೈವದ ಪ್ರಸಾದ ರೂಪವಾಗಿ ಅನ್ನ ಸಂತರ್ಪಣೆಯು ನಡೆಯಲಿರುವುದು. ಸರ್ವ ಗ್ರಾಮಸ್ಥರು ಹಾಗೂ ಭಗವದ್ಭಕ್ತರು ಆಗಮಿಸಿ ಶ್ರೀ ದೈವಗಳ ಕುಂಕುಮ ಗಂಧ, ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ತೆನೆ ಬೇಕಾದವರು ಚಾವಡಿಯಿಂದ ಬೆಳಿಗ್ಗೆ ಪಡೆದುಕೊಳ್ಳಬಹುದು. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!