- Advertisement -
- Advertisement -


ವಿಟ್ಲ : ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ, ಇದರ ಜಂಟಿ ಆಶ್ರಯದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಉಚಿತ 3 ದಿನಗಳ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ಕಿಟ್ ವಿತರಣೆ ನಡೆಯಲಿದೆ.

ದಿನಾಂಕ : 24/07/2022 ನೇ ಆದಿತ್ಯವಾರ ದಿಂದ 26/07/2022 ಮಂಗಳವಾರ, ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 4:30 ಗಂಟೆ ತನಕ ಅಕ್ಷಯ ಸಮುದಾಯ ಭವನ ಶಾಂತಿನಗರ ಮಂಗಳೂರು ರಸ್ತೆ- ವಿಟ್ಲ ಇಲ್ಲಿ ನಡೆಯಲಿದೆ. ಉಜಿತವಾಗಿ 3 ದಿನಗಳ ಬೃಹತ್ ಆರೋಗ್ಯ ತಪಾಸಣಾ ತರಬೇತಿ ಶಿಬಿರ ಹಾಗೂ ಕಿಟ್ ವಿತರಣೆ ನಡೆಯಲಿದ್ದು, ಬಿಪಿ, ಶುಗರ್, ಕಣ್ಣಿನ ತಪಾಸಣೆ, ಶ್ವಾಸ ಕೋಶ, ಹೃದಯ, ಕಿಡ್ನಿ ಸಂಬಂಧಿರಕ್ತ ಪರೀಕ್ಷೆ ಸಹಿತ ಹಲವು 17 ಬಗೆಯ ತಪಾಸಣೆಗಳ ಜೊತೆಗೆ ಕಿಟ್ ವಿತರಣೆಯು ನಡೆಯಲಿವೆ.
ತರಬೇಕಾದ ದಾಖಲೆಗಳು:
- ಕಟ್ಟಡ ಕಾರ್ಮಿಕರ ಕಾರ್ಡ್
- ಆದರ್ ಕಾರ್ಡ್
- ರೇಷನ್ ಕಾರ್ಡ್
ಮುಂಚಿತವಾಗಿ ನೋಂದಾವಣಿ ಮಾಡಿಸಿಕೊಳ್ಳಲು ಸಂಪರ್ಕಿಸಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ, 9900336599, 9019500637
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಎದುರುಗಡೆಯ ಕಟ್ಟಡ. 9019500637, 9900336599



- Advertisement -