Saturday, June 28, 2025
spot_imgspot_img
spot_imgspot_img

ವಿಟ್ಲ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡ ಮೋನಿಶ್ ವಿಟ್ಲ

- Advertisement -
- Advertisement -

ವಿಟ್ಲ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಸೃಷ್ಟಿಶಕ್ತಿ ಸಂಸ್ಥೆ ಕೊಡಮಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಮೋನಿಶ್ ವಿಟ್ಲ ಪುರಸ್ಕೃತರಾಗಿದ್ದಾರೆ.

ವಿಟ್ಲ ಇರಂದೂರು ನಿವಾಸಿ ಲೋಕೇಶ್ ಹಾಗೂ ಲತಾ ಲೋಕೇಶ್ ದಂಪತಿಗಳ ಪುತ್ರ ಮೋನಿಶ್ ಚಿಕ್ಕ ವಯಸ್ಸಿನಲ್ಲೇ ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ವಿಟ್ಲದ ಶಿವಂ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದು, ಈಗಾಗಲೇ‌ ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದು, ಬೇರೆ ಬೇರೆ ಕ್ಷೇತ್ರದಲ್ಲೂ ಸೈ ಎನ್ನಿಸಿಕೊಂಡ ಬಹುಮುಖ ಪ್ರತಿಭೆ.

ಹತ್ತು-ಹಲವು ಸಂಘ ಸಂಸ್ಥೆಗಳ ಸನ್ಮಾನಗಳು ಇವರ ಮಡಿಲಿಗೆ ಸೇರಿದೆ. ಇದೀಗಾ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಸೃಷ್ಟಿಶಕ್ತಿ ಸಂಸ್ಥೆ ಕೊಡಮಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದಾರೆ.

astr
- Advertisement -

Related news

error: Content is protected !!