- Advertisement -
- Advertisement -
ವಿಟ್ಲ: ಅಕ್ರಮ ಗೋ ಸಾಗಾಟ ಮಾಡುತ್ತಿದ್ದಾತನನ್ನು ಹಿಂದೂ ಜಾಗರಣ ವೇದಿಕೆ ವಿಟ್ಲ ಕಾರ್ಯಕರ್ತರು ವಾಹನವನ್ನು ತಡೆದು ಗೋವನ್ನು ರಕ್ಷಿಸಿದ ಘಟನೆ ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿ ನಡೆದಿದೆ.

ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿ ಕೇರಳ ಪರವಾನಿಗೆ ಇದ್ದಂತಹ ಮಾಣಿ ಮುಳಿಬೈಲು ನಿವಾಸಿ ಗೋವನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿಯನ್ನು ಪಡೆದ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕಿನ ಕಾರ್ಯಕರ್ತರು ವಾಹನವನ್ನು ಅಡ್ಡಗಟ್ಟಿ ಗೋವನ್ನು ರಕ್ಷಣೆ ಮಾಡಿದ್ದಾರೆ.



ಸಂಶಯ ಬಾರದಿರುವಂತೆ ಗೋವಿನ ಜೊತೆಗೆ ಕರುವನ್ನು ಸಾಗಿಸುತ್ತಿದ್ದ, ಈತನ ಬಗ್ಗೆ ಊರಿನ ನಾಗರಿಕರಿಗೆ ಋಣಾತ್ಮಕ ಅಭಿಪ್ರಾಯವಿದೆ ಎಂದು ತಿಳಿದುಬಂದಿದೆ.ವಿಟ್ಲ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -