Monday, April 29, 2024
spot_imgspot_img
spot_imgspot_img

ವಿಟ್ಲ: ಚಂದಳಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ವಜ್ರಮಹೋತ್ಸವ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla
vtv vitla

ವಿಟ್ಲ: ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಚಂದಳಿಕೆಯಲ್ಲಿ ವಜ್ರಮಹೋತ್ಸವ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಎಂ.ಆರ್. ಪಿ.ಎಲ್.ಸಿ.ಎಸ್.ಆರ್ ನಿಧಿಯಿಂದ ನಿರ್ಮಾಣಗೊಂಡ ಮತ್ತು ಎಸ್.ಎಲ್.ವಿ ಬುಕ್ ಏಜೆನ್ಸೀಸ್‌ಯಿಂದ ನಿರ್ಮಾಣಗೊಂಡ ಕೊಠಡಿಗಳ ಉದ್ಘಾಟನೆ ನಡೆಯಿತು.

ಈ ಸಂದರ್ಭದಲ್ಲಿ ವಜ್ರ ಭವನದ ಉದ್ಘಾನೆಯನ್ನು ಸಂಜೀವ ಮಠಂದೂರು ಶಾಸಕರು ಪುತ್ತೂರು ಇವರು ನೆರವೇರಿಸಿದರು. ಎಸ್.ಎಲ್.ವಿ ಕೊಠಡಿಗಳನ್ನು ಶ್ರೀ ಕೃಷ್ಣ ಹೆಗ್ಡೆ ( ಗ್ರೂಪ್ ಜನರಲ್ ಮೇನೆಜರ್(ಎಚ್.ಆರ್) ಎಂ.ಆರ್.ಪಿ.ಎಲ್ ಇವರು ನೆರವೇರಿಸಿದರು. ವಜ್ರಮುಷ್ಢಿ ಸಭಾಂಗಣವನ್ನು ಶ್ರೀ ದಿವಾಕರ್ ದಾಸ್ ನೇರ್ಲಾಜೆ, ಎಸ್.ಎಲ್.ವಿ ಬುಕ್ ಎಜೆನ್ಸೀಸ್ ಮೈಸೂರು ಇವರು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಸಂಜೀವ ಮಠಂದೂರು ಶಾಸಕರು ಪುತ್ತೂರು, ಶ್ರೀ ಕೃಷ್ಣ ಹೆಗ್ಡೆ (ಗ್ರೂಪ್ ಜನರಲ್ ಮೇನೆಜರ್ (ಎಚ್.ಆರ್) ಎಂ.ಆರ್.ಪಿ.ಎಲ್, ಶ್ರೀ ದಿವಾಕರ್ ದಾಸ್ ನೇರ್ಲಾಜೆ, ಎಸ್.ಎಲ್.ವಿ ಬುಕ್ ಎಜೆನ್ಸೀಸ್ ಮೈಸೂರು, ಶ್ರೀಮತಿ ರಕ್ಷಿತಾ ಸನತ್ ಚಂದಳಿಕೆ, ಸದಸ್ಯರು ಪಟ್ಟಣ ಪಂಚಾಯತ್ ವಿಟ್ಲ, ಶ್ರೀ ಜ್ಞಾನೇಶ್ ಎಂ.ಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಂಟ್ವಾಳ.

ರವಿಪ್ರಕಾಶ್ ವಿಟ್ಲ, ಸದಸ್ಯರು ವಿಠಲ ವಿದ್ಯಾವರ್ಧಕ ಸಂಘ ವಿಟ್ಲ, ಲ|ಮೋನಪ್ಪ ಗೌಡ, ಶಿವಾಜಿನಗರ ಅಧ್ಯಕ್ಷರು ಲಯನ್ಸ್ ಕ್ಲಬ್ ವಿಟ್ಲ, ಲ| ಪುಪ್ಪಲತಾ, ನಿವೃತ್ತರು ಸಣ್ಣ ನೀರಾವರಿ ಇಲಾಖೆ ಮಂಗಳೂರು, ರಮೇಶ್ ನಾಯಕ್ ರಾಯಿ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರು. ಅಧ್ಯಕ್ಷರು ಅಧ್ಯಾಪಕರ ಸಹಕಾರಿ ಸಂಘ, ಅನಂತಕೃಷ್ಣ ಹೆಬ್ಬಾರ್, ನಿವೃತ್ತ ಪ್ರಾಂಶುಪಾಲರು., ನಾರಾಯಣ ಗೌಡ, ಅಧ್ಯಾಪಕರು ಪ್ರೌಢಶಾಲೆ ಗೋಳ್ತಮಜಲು ಉಪಸ್ಥಿತರಿದ್ದು ವಜ್ರಮಹೋತ್ಸವ ಸಮಾರಂಭಕ್ಕೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಗಾಗಿ ಸಹಕರಿಸಿದ ಮಂಜುನಾಥ ಕಲ್ಲಕಟ್ಟ, ಶಶಿಕಾಂತ್ ಕಾಂಟ್ರೆಕ್ಟರ್ ಮತ್ತು ಚಂಬಳಿಕೆ ಶಾಲೆಯ ನಿವೃತ್ತ ಶಿಕ್ಷಕಿ ದುರ್ಗಾ ಟೀಚರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಬಳಿಕ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆರ್ ಕೆ ಆರ್ಟ್ಸ್’ನ ರಾಜೇಶ್ ವಿಟ್ಲ ನಿರ್ದೇಶನದಲ್ಲಿ ಶಾಲಾ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದಲ್ಲಿ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಲ| ದೇಜಪ್ಪ ಪೂಜಾರಿ ನಿಡ್ಯ, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ನಾರಾಯಣ ಪೂಜಾರಿ ಚಪುಡಿಯಡ್ಕ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ ದೇವಿಪ್ರಸಾದದ ಶೆಟ್ಟಿ ಬೆಂಞತ್ತಿಮಾರ್, ಚಂದಳಿಕೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶ್ರೀಮತಿ ಭವಾನಿ ರೈ ಕೊಲ್ಯ, ಶಾಲಾ ಮುಖ್ಯೋಪಾಧ್ಯಾಯರು ಬಿ. ವಿಶ್ವನಾಥ ಗೌಡ ಕುಳಾಲು ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಹೆತ್ತವರು ಊರ ಪರವೂರ ಶಾಲಾಭಿಮಾನಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!