Saturday, May 4, 2024
spot_imgspot_img
spot_imgspot_img

ವಿಟ್ಲ ಜಾತ್ರೋತ್ಸವದ ಫ್ಯಾನ್ಸಿ ಮಳಿಗೆ ವ್ಯಾಪಾರಿಯ ಮೇಲೆ ರೌಡಿಶೀಟರ್ ತಂಡದಿಂದ ಹಲ್ಲೆ

- Advertisement -G L Acharya panikkar
- Advertisement -

ಹಲ್ಲೆ ಬಿಡಿಸಲು ಬಂದ ಮಹಿಳೆಯ ಮಾನಭಂಗಕ್ಕೆ ಯತ್ನ

ಪ್ರಮುಖ ಆರೋಪಿ ಕಡಂಬು ಗಣೇಶ್, ಮುಂಜುನಾಥ್ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲು

ವಿಟ್ಲ ಜಾತ್ರೋತ್ಸವ ಜನವರಿ 10 ರಿಂದ ನಡೆಯುತ್ತಿದ್ದು ಜನವರಿ 21ಕ್ಕೆ ಮಹಾ ರಥೋತ್ಸವ ನಡೆಯಲಿದೆ. ಈ ಪ್ರಯುಕ್ತ ಜಾತ್ರೋತ್ಸವ ಅದ್ದೂರಿಯಾಗಿ ಅನೇಕ ಮಂದಿ ತಮ್ಮ ವ್ಯಾಪಾರ ಮಳಿಗೆಯನ್ನು ಹಾಕಿರುತ್ತಾರೆ.

ಜನವರಿ 18 ರಂದು ರಾತ್ರಿ ಬಯ್ಯದ ಬಲಿ ನಡೆಯುತ್ತಿದ್ದ ವೇಳೆ ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುವ ವೇಳೆಯಲ್ಲಿ ಗಣೇಶ್ ಕಡಂಬು, ಮಂಜುನಾಥ್ ಸೇರಿ ಆರು ಮಂದಿ ಹುಡುಗರು ಅಂಗಡಿ ಯಾಕೆ ಬಂದ್ ಮಾಡುತ್ತೀಯಾ? ಎಂದು ಹೇಳಿ ಅವಾಚ್ಯ ಶಬ್ಧಗಳಿಂದ ಬೈದು ಮೈಮೇಲೆ ಕೈ ಹಾಕಿ, ದೂಡಿ ನಾನು ಯಾರು ಗೊತ್ತಾ ಎಂದು ಹೇಳಿ ನೆಲಕ್ಕೆ ಉರುಳಿಸಿ ಈ ಪೈಕಿ ಮಂಜನಾಥ್ ಎಂಬಾತ ಹಿಗ್ಗಾಮುಗ್ಗ ಹಲ್ಲೆ ಮಾಡಿರುತ್ತಾರೆ.

ಪಕ್ಕದ ಮಳಿಗೆಯ ಸ್ಟೀಲ್ ಪಾತ್ರೆ ಅಂಗಡಿಯಿಂದ ಪಾತ್ರೆ ತಂದು ಅದರಿಂದ ಸುರೇಶ್‌ರವರ ಮೇಲೆ ಹಲ್ಲೆ ನಡೆಸಿದ್ದು, ಬಿಡಿಸಲು ಬಂದ ಸುರೇಶ್‌ರವರ ಪತ್ನಿಯ ಮೈಗೆ ಕೈ ಹಾಕಿ ಸೀರೆ ಎಳೆದು ಮಾನಭಂಗಕ್ಕೆ ಯತ್ನ ನಡೆಸಿ ಹಲ್ಲೆ ನಡೆಸಿದ್ದಾರೆ. ಕೂಡಲೇ ಘಟನಾ ಸ್ಥಳದಲ್ಲಿ ಸಾರ್ವಜನಿಕರು ಗುಂಪುಗೂಡಿದ್ದು, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ , ನೋಡಿಕೊಳ್ಳುತ್ತೇನೆಂದು ಗಣೇಶ್ ಕಡಂಬು, ಮಂಜುನಾಥ್ ಹಾಗೂ ಇನ್ನುಳಿದವರು ಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಬಗ್ಗೆ ಹಲ್ಲೆಗೊಳಗಾದ ಸುರೇಶ್ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಗಣೇಶ್ ಕಡಂಬು, ಮಂಜುನಾಥ್ ಸಹಿತ ನಾಲ್ವರ ವಿರುದ್ಧ ಸೆಕ್ಷನ್ 143, ಸೆಕ್ಷನ್ 147 , ಸೆಕ್ಷನ್ 323 , ಸೆಕ್ಷನ್ 504 , ಸೆಕ್ಷನ್ 354, ಸೆಕ್ಷನ್ 506 ಸೆಕ್ಷನ್ 149 ಪ್ರಕರಣ ದಾಖಲಾಗಿದೆ.

ಸುರೇಶ್ ಅವರ ಪಕ್ಕದ ಮಳಿಗೆ ಸ್ಟೀಲ್ ಪಾತ್ರೆ ಮಳಿಗೆಗೂ ಈ ಆರೋಪಿಗಳು ಹಾನಿ ಮಾಡಿದ್ದು, ಈ ಬಗ್ಗೆ ಸ್ಟೀಲ್ ಪಾತ್ರೆ ಮಳಿಗೆ ಮಾಲಕರು ಗಣೇಶ್ ಕಡಂಬು, ಮಂಜುನಾಥ್ ಹಾಗೂ ಇನ್ನುಳಿದವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಜನವರಿ 14 ರಿಂದ ಜಾತ್ರೋತ್ಸವದ ಸುಲುವಾಗಿ ಅನೇಕ ವ್ಯಾಪಾರ ಮಳಿಗೆಗಳು ತೆರೆದಿದ್ದು, ಈ ಪೈಕಿ ಕೆಲವು ಬಡ ವ್ಯಾಪಾರಿಗಳ ಮಳಿಗೆಗೆ ರೌಡಿ ಶೀಟರ್ ಗಣೇಶ್ ಕಡಂಬು ತಂಡದವರು ನುಗ್ಗಿ ದರ್ಪ ತೋರಿಸಿ ಕೀಟಲೆ, ದಂಧೆ ನಡೆಸಿದ್ದಾರೆ. ಈ ಬಗ್ಗೆ ಬಡ ವ್ಯಾಪಾರ ಮಳಿಗೆಯ ತಮ್ಮ ನೋವನ್ನು ಹೇಳಿಕೊಂಡಿಂದ್ದಾರೆಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಗಣೇಶ್ ಕಡಂಬು ರೌಡಿ ಶೀಟರ್ ಆಗಿರುತ್ತಾನೆ. ಸದಾ ಕೋಳಿ ಅಂಕದಲ್ಲಿ ಜೂಜಾಡುವ ಗಣೇಶ ಕಡಂಬು ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದು, ಈತ ವಿಟ್ಲ ಜಾತ್ರೋತ್ಸವದ ಸಂದರ್ಭದಲ್ಲಿ ಬೇರೆ ಊರಿನ ಯುವಕರನ್ನು ಕರೆದು ಸ್ಕೆಚ್ ಹಾಕಿ ಬಂದಂತೆ ಸಾರ್ವಜನಿಕ ವಲಯದಲ್ಲಿ ಸಂಶಯ ವ್ಯಕ್ತವಾಗಿದ್ದು ಜಾತ್ರೋತ್ಸವಕ್ಕೆ ಬರುವ ಭಕ್ತಾದಿಗಳು ಈತನ ತಂಡದ ಮೇಲೆ ಕಣ್ಗಾವಲು ಇರಿಸಿದ್ದಾರೆ.

- Advertisement -

Related news

error: Content is protected !!