Sunday, June 14, 2026
spot_imgspot_img
spot_imgspot_img

ವಿಟ್ಲ: ತೋಡಿನಲ್ಲಿ ಗುರುತು ಪತ್ತೆಯಾಗದ ರೀತಿಯಲ್ಲಿ ಶವ ಪತ್ತೆ..!

- Advertisement -
- Advertisement -

ವಿಟ್ಲ: ತೋಡಿನಲ್ಲಿ ಶವವೊಂದು ಪತ್ತೆಯಾದ ಘಟನೆ ಪುಣಚ ಗ್ರಾಮದ ದಂಬೆ ಎಂಬಲ್ಲಿ ನಡೆದಿದೆ.

ತೋಡಿನಲ್ಲಿ ಶವದ ಕಾಲು ಮತ್ತು ಕೈ ಮಾತ್ರ ಕಾಣುತ್ತಿದ್ದು, ಗುರುತು ಪತ್ತೆಯಾಗಿಲ್ಲ. ಸ್ಥಳೀಯರು ತೋಡಿನಲ್ಲಿ ಶವವಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೇಪು ಗ್ರಾಮದ ಕುಕ್ಕೆಬೆಟ್ಟು ನಿವಾಸಿ ಬಾಬುನಾಯ್ಕರ ಮಗ ಕುಶಾಲಕ್ಷ ನಿನ್ನೆ ಬೆಳಗ್ಗೆ 11ಕ್ಕೆ ಮನೆಯಿಂದ ತೆರಳಿ ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಲ್ಲದೆ ಬೈತಡ್ಕ ಹೊಳೆಯಲ್ಲಿ ಕಾರು ಬಿದ್ದು ಯುವಕರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಈಗ ಸ್ಥಳೀಯರಲ್ಲಿ ಈ ಪ್ರಕಾರಣಕ್ಕೂ ಸಂಬಂಧವಿದೆಯಾ ಎಂಬುವುದು ಕುತೂಹಲ ಮೂಡಿಸಿದೆ.

ಈ ಬಗ್ಗೆ ಸಂಶಯ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ

- Advertisement -

Related news

error: Content is protected !!