Monday, June 15, 2026
spot_imgspot_img
spot_imgspot_img

ವಿಟ್ಲ: ದಾಖಲೆ ಇಲ್ಲದ ಲಕ್ಷಾಂತರ ರೂ ಹಣ ಸಾಗಾಟ; ಓರ್ವ ಪೊಲೀಸ್‌ ವಶಕ್ಕೆ

- Advertisement -
- Advertisement -

ವಿಟ್ಲ: ಯಾವುದೇ ದಾಖಲೆ ಇಲ್ಲದೇ ಲಕ್ಷಾಂತರ ರೂ ನಗದನ್ನು ಸಾಗಿಸುತ್ತಿದ್ದ ವೇಳೆ ಆರೋಪಿ ಸಹಿತ ನಗದು ಹಾಗೂ ಕಾರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡ ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿ ನಡೆದಿದೆ.

ಕೊಳ್ನಾಡು ಗ್ರಾಮದ ಕಟ್ಟೆ ಮನೆ ನಿವಾಸಿ ಬಶೀರ್‌(29) ಎಂಬಾತ ಹಣ ಸಾಗಿಸುತ್ತಿದ್ದ ವ್ಯಕ್ತಿ ಎನ್ನಲಾಗಿದೆ.

ಕರ್ನಾಟಕ ರಾಜ್ಯ ಚುನಾವಣೆ ಪ್ರಯುಕ್ತ ಅಂತರರಾಜ್ಯ ಚೆಕ್‌ ಪೋಸ್ಟ್‌ನಲ್ಲಿ ವಿಟ್ಲ ಎಸ್.ಐ.ಸಂದೀಪ್ ಶೆಟ್ಟಿ ಸಿಬ್ಬಂದಿಗಳ ಜೊತೆ ಕರ್ತವ್ಯದಲ್ಲಿರುವ ವೇಳೆ ವಾಹನ ತಪಾಸಣೆ ನಡೆಸುತ್ತಿರುವಾಗ ಸಾಲೆತ್ತೂರು ಕಡೆಯಿಂದ ಬಾಕ್ರಬೈಲು ಕಡೆಗೆ ಹೋಗುತ್ತಿದ್ದ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾರಿನ ಡ್ಯಾಶ್‌ ಬೋರ್ಡ್‌‌ನಲ್ಲಿ 500 ರೂಪಾಯಿ ಮುಖ ಬೆಲೆಯ ತಲಾ 100 ನೋಟುಗಳಿರುವ 3 ಬಂಡಲ್‌ಗಳು ಇದ್ದು ಇದರಲ್ಲಿ ಒಟ್ಟು ರೂಪಾಯಿ 1.50,000/- ಹಣ ಪತ್ತೆಯಾಗಿದ್ದು ಯಾವುದೇ ದಾಖಲೆ ಇಲ್ಲದೇ ಇರುವುದರಿಂದ ವಿಟ್ಲ ಪೊಲೀಸರು ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!