Saturday, April 20, 2024
spot_imgspot_img
spot_imgspot_img

ವಿಟ್ಲ: ಶುಭಾರಂಭಗೊಂಡ “ಬಿಗ್ ಬೇಕ್ಸ್ ಸ್ವೀಟ್ಸ್ ಮತ್ತು ಐಸ್ ಕ್ರೀಂ ಪಾರ್ಲರ್”

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದ ಮೇಗಿನಪೇಟೆಯಲ್ಲಿ ನೂತನವಾಗಿ “ಬಿಗ್ ಬೇಕ್ಸ್ ಸ್ವೀಟ್ಸ್ ಮತ್ತು ಐಸ್ ಕ್ರೀಂ ಪಾರ್ಲರ್” ಶುಭಾರಂಭಗೊಂಡಿತು.

ಸಮಸ್ತ ಕೇರಳ ಜಂ ಇಯ್ಯಾತುಲ್ ಉಲಾಮ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಬಂಬ್ರಾಣ ಉಸ್ತಾದ್ ಮತ್ತು ಮುಹಮ್ಮದೂಲ್ ಫೈಝಿ ವಾಲೆಮುಂಡೊವು ದುವಾಃ ಮೂಲಕ ಚಾಲನೆ ನೀಡಲಾಯಿತು. ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ಉದ್ಘಾಟಿಸಿದರು.

ವಿಟ್ಲ ಕೇಂದ್ರ ಮಸೀದಿ ಮುದರಿಸ್ ಮುಹಮ್ಮದ್ ಆಲಿ‌ ಫೈಝಿ, ಕೆಲಿಂಜ ಖತೀಬ್ ಅಬ್ಬಾಸ್ ದಾರಿಮಿ, ಮಂಗಿಲಪದವು ಖತೀಬ್ ಅಬ್ದುಸಲಾಂ ಅಮ್ಜದಿ, ಕೊಡಂಗೆ ಖತೀಬ್ ಇಬ್ರಾಹಿಂ ಕಾಮಿಲ್ ಸಖಾಫಿ,
ಒಕ್ಕೆತ್ತೂರು ಖತೀಬ್ ಮಜೀದ್ ಸಖಾಫಿ ಭಾಗವಹಿಸಿದ್ದರು.

ವಿಟ್ಲ ವಾಣಿಜ್ಯ ಸಂಘದ ಅಧ್ಯಕ್ಷ ಬಾಬು ಕೆ.ವಿ, ಎಂ ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಮೊಹಮ್ಮದ್ ಟಿ.ಕೆ, ಶಾಕೀರ್ ಅಳಕೆಮಜಲು, ರಿಯಾಜ್ ವಿಟ್ಲ, ಇಕ್ಬಾಲ್ ಶೀತಲ್, ಶರೀಪ್ ಕೊಡಂಗೆ, ಅಶ್ರಫ್ ವಿ.ಎಚ್, ಖಲಂದರ್ ಪರ್ತಿಪ್ಪಾಡಿ, ವಿಕೆಎಂ ಅಶ್ರಪ್, ರಘು ಮಂಗಳಪದವು, ಅಬ್ದುಲ್ ರಹಿಮಾನ್ ಮಂಗಳಪದವು, ಇಬ್ರಾಹೀಂ ಹಳೆಮನೆ, ಇಬ್ರಾಹಿಂ ಏರ್ ಸೌಂಡ್ಸ್, ರಮ್ಲಾನ್ ಮಂಗಳಪದವು, ಖಲಂದರ್, ಮೊಹಮ್ಮದ್ ಇಕ್ಬಾಲ್ ಎಂ ಎ, ಶರೀಫ್ ಕೆಲಿಂಜ ಮೊದಲಾದವರು ಭಾಗವಹಿಸಿದ್ದರು.

ಇಲ್ಲಿ ಅತ್ಯುತ್ತಮ ಗುಣಮಟ್ಟದ ಹೊಸ ವಿನ್ಯಾಸದ ಕೇಕ್ ಐಟಮ್ ಗಳು, ಸ್ವೀಟ್ಸ್ ಬೇಕರಿ ವಿವಿಧ ತಿಂಡಿ ತಿನಿಸುಗಳು, ಐಸ್ ಕ್ರೀಂ, ಜ್ಯೂಸ್, ಚಾರ್ಟ್ಸ್ ಐಟಂ ಗಳಲ್ಲಿ ಪಾನಿಪುರಿ, ದಹಿಪುರಿ, ಮಸಾಲಪುರಿ, ಪಾವ್ ಬಾಜಿ, ಪನೀರ್ ಪಾವ್ ಬಾಜಿ ಸೇರಿದಂತೆ ಸುಮಾರು 25 ಕ್ಕಿಂತಲೂ ಅಧಿಕ ಐಟಂಗಳು ದೊರೆಯಲಿದೆ.

ಕೇಕ್ ಗಳಲ್ಲಿ ಲೈವ್ ಕೇಕ್ಸ್, ಫೋಟೋ ಕೇಕ್ಸ್, ವೆಡ್ಡಿಂಗ್ ಕೇಕ್ಸ್, ಗ್ರಾಹಕರ ಬೇಡಿಕೆಗೆ ತಕ್ಕಂತೆ ತಕ್ಷಣವೇ ಸಿದ್ಧಪಡಿಸಿ ಕೊಡಲಾಗುತ್ತದೆ.ಸ್ವೀಟ್ಸ್ ಗಳಲ್ಲಿ ಖಾಜು ಸ್ವೀಟ್ಸ್, ಬಂಗಾಳಿ ಸ್ವೀಟ್ಸ್, ಚಂಪಕಳಿ, ಚಮ್ ಚಮ್, ಹಾಗೂ ಖಾಶಿ ಹಲ್ವಾ, ಅಂಜೀರಾ ಹಲ್ವಾ ಮೊದಲಾದವುಗಳವು ಇಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಐಸ್ ಕ್ರೀಂ ಗಳಲ್ಲಿ Chips Oh Boy, Who Cares, Tall Beauty, Flaming Desire, Moccaccino, Gadbud, Gold Dust, Old School ಮುಂತಾದ ಐಸ್ ಕ್ರೀಂ ಗಳು ಲಭ್ಯವಿದೆ. 5 ಕಿ.ಮೀ ವ್ಯಾಪ್ತಿಗೆ ಹೋಂ ಡೆಲಿವರಿ ಸೌಲಭ್ಯವಿದ್ದು, ಆರ್ಡರ್ ಮಾಡಿದ ಕ್ಷಣಾರ್ಧಗಳಲ್ಲಿ ತಲುಪಿಸುವ ವ್ಯವಸ್ಥೆ ಇದೆ. ಮನೆಮಂದಿ ಕುಟುಂಬ ಸಮೇತರಾಗಿ ಬಂದು ಕುಳಿತುಕೊಂಡು ತಿನ್ನಲು ವಿಶೇಷ ವ್ಯವಸ್ಥೆ ಇದೆ.

ವಿಟ್ಲದಲ್ಲಿ ಒಂದೇ ಸೂರಿನಡಿಯಲ್ಲಿ ಕೇಕ್ ಐಟಮ್ ಗಳು, ಸ್ವಿಟ್ಸ್ ಬೇಕರಿ ವಿವಿಧ ತಿಂಡಿ ತಿನಿಸುಗಳು, ಐಸ್ ಕ್ರೀಂ, ಜ್ಯೂಸ್, ಚಾರ್ಟ್ಸ್ ಐಟಂಗಳು ಲಭ್ಯವಿರುವ ಮೊತ್ತ ಮೊದಲ ಮಳಿಗೆ ಇದಾಗಿದೆ.

- Advertisement -

Related news

error: Content is protected !!