Sunday, June 29, 2025
spot_imgspot_img
spot_imgspot_img

ವಿಟ್ಲ: ಪದೇ ಪದೇ ಕೈಕೊಡುವ BSNL ಟವರ್; ಸಮಸ್ಯೆಯಿಂದ ಗ್ರಾಮಸ್ಥರು ಕಂಗಾಲು

- Advertisement -
- Advertisement -

ಬಿಎಸ್‌ಎನ್‌ಎಲ್‌ ಟವರ್ ಪದೇ ಪದೇ ಕೈಕೊಡುವ ಪರಿಣಾಮ ಗ್ರಾಮಸ್ಥರು ಕಳೆದ ಹಲವು ಸಮಯಗಳಿಂದ ತೊಂದರೆ ಅನುಭವಿಸುತ್ತಿರುವ ಘಟನೆ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದಲ್ಲಿ ನಡೆದಿದೆ.

ಕರೋಪಾಡಿ ಗ್ರಾಮದ ಪಳ್ಳದಕೋಡಿ ಎಂಬಲ್ಲಿ ಬಿಎಸ್‌ಎನ್‌ಎಲ್‌ ಟವರ್ ಇದ್ದು ನಿರಂತರ ನೆಟ್‌ವರ್ಕ್‌ ಸಮಸ್ಯೆ ತಲೆದೂರಿದೆ. ಕಳೆದ 10 ವರ್ಷಗಳ ಹಿಂದೆ ಟವರ್ ನಿರ್ಮಿಸಲಾಗಿದ್ದು ಬೇರೆ ಯಾವುದೇ ಮೊಬೈಲ್ ಟವರ್ ಇರುವುದಿಲ್ಲ. ಹೀಗಿರುವಾಗ ಕಳೆದ ಕೆಲವು ಸಮಯಗಳಿಂದ ಈ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಕವರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಅದೂ ಅಲ್ಲದೆ ವಿದ್ಯುತ್ ಕಡಿತದ ಸಮಯದಲ್ಲೂ ನೆಟ್‌ವರ್ಕ್‌ ಇರುವುದಿಲ್ಲ. ಕೆಲವು ಬಾರಿ ವಿದ್ಯುತ್ ಸಂಪರ್ಕವಿದ್ದರೂ ಮೊಬೈಲ್ ನೆಟ್‌ವರ್ಕ್‌ ಇರುವುದಿಲ್ಲ. ಇದನ್ನೇ ನಂಬಿಕೊಂಡಿರುವ ಗ್ರಾಮಸ್ಥರು ಈ ರೀತಿಯ ತೊಂದರೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕೂಡಲೇ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾದ ಅವಶ್ಯಕತೆ ಸಾಕಷ್ಟಿದೆ.

astr
- Advertisement -

Related news

error: Content is protected !!