Friday, July 11, 2025
spot_imgspot_img
spot_imgspot_img

ವಿಟ್ಲ: ಬಸ್ಸು ನಿಲ್ದಾಣದಲ್ಲಿ “ಕ್ಷಯ ಮುಕ್ತ ಕರ್ನಾಟಕ” ಬೀದಿ ನಾಟಕ

- Advertisement -
- Advertisement -

ವಿಟ್ಲ: ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕ್ಷಯ ನಿಯಂತ್ರಣಾಧಿಕಾರಿಗಳ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಹಾಗೂ ಆಳ್ವಾಸ್ ಕಾಲೇಜು ಮೂಡಬಿದ್ರೆ ಇದರ ಜಂಟಿ ಆಯೋಗದಲ್ಲಿ “ಕ್ಷಯ ಮುಕ್ತ ಕರ್ನಾಟಕ” ಬೀದಿ ನಾಟಕ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಸ್ಸ್ ನಿಲ್ದಾಣದಲ್ಲಿ ನಡೆಯಿತು.

ಪ್ರಸ್ತುತ ಮನುಷ್ಯನನ್ನು ಕಾಡುತ್ತಿರುವ ಈ ಮಹಾಮಾರಿ ಸಾಂಕ್ರಾಮಿಕ ರೋಗ, ತೀರ್ವವಾಗಿದ್ದು ಪ್ರತೀ ನಿಮಿಷಕ್ಕೆ ಮೂರರಂತೆ ಕ್ಷಯ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನಲೆ ಕ್ಷಯ ರೋಗದ ಬಗ್ಗೆ ಜನಜಾಗೃತಿ ಮೂಡಿಸಲು ನಡೆದ ಬೀದಿ ನಾಟಕವನ್ನು ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್‌ಎಂ.ಎನ್ ಉದ್ಘಾಟಿಸಿ ಬೀದಿ ನಾಟಕಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ, ನಟೇಶ್, ಡಾ. ವೇದಾವತಿ ಆಡಳಿತ ವೈದ್ಯಾಧಿಕಾರಿ, ಡಾ.ಶ್ವೇತಾ ಅರವಳಿಕೆ ತಜ್ಞೆ ವಿಟ್ಲ, ಹಿರಿಯ ಸುರಕ್ಷತಾಧಿಕಾರಿ ಇಂದಿರಾ, ಹಿರಿಯ ಚಿಕಿತ್ಸಾ ಮೇಲ್ವಿಚಾರಕಿ ಶ್ರುತಿ, ಹಿರಿಯ ಪ್ರಯೋಗ ಶಾಲಾ ಮೇಲ್ವಿಚಾರಕರಾದ ರಮೇಶ್(ಪುತ್ತೂರು ಘಟಕ), ಹಾಗೂ ಎಲ್ಲಾ ಕಿರಿಯ ಸುರಕ್ಷತಾಧಿಕಾರಿಗಳು, ಆಶಾ ಕಾರ್ಯರ್ತರು, ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!