Wednesday, June 24, 2026
spot_imgspot_img
spot_imgspot_img

ವಿಟ್ಲ: ಬಿಲ್ಲವ ಸಂಘ (ರಿ)ಇದರ ಬೆಳ್ಳಿಹಬ್ಬ ಸಂಭ್ರಮೋತ್ಸವದ ಪ್ರಯುಕ್ತ 20ನೇ ಕಾರ್ಯಕ್ರಮ ಕೃಷಿ ಮಾಹಿತಿ ಶಿಬಿರ

- Advertisement -
- Advertisement -

ವಿಟ್ಲ: ಬಿಲ್ಲವ ಸಂಘ (ರಿ) ವಿಟ್ಲ ಶಿವಗಿರಿ-ಪೊನ್ನೊಟ್ಟು ಇಲ್ಲಿ ಬೆಳ್ಳಿಹಬ್ಬ ಸಂಭ್ರಮೋತ್ಸವದ ಪ್ರಯುಕ್ತ 20ನೇ ಕಾರ್ಯಕ್ರಮ ಕೃಷಿ ಮಾಹಿತಿ ಶಿಬಿರವು ದಿನಾಂಕ :21-10-2022ನೇ ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಶಿವಗಿರಿ-ಪೊನ್ನೊಟ್ಟು ವಿಟ್ಲ ಇಲ್ಲಿ ಜರಗಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ಳಿ ಹಬ್ಬ ಸಂಭ್ರಮೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಗೀತಪ್ರಕಾಶ್‌ ನೇರವೇರಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಬೆಳೆ ಉತ್ಪಾದನಾ ವಿಭಾಗ, ಸಿ.ಪಿ.ಸಿ.ಆರ್‌.ಐ ವಿಟ್ಲ ಇದರ ವಿಜ್ಞಾನಿ ಭವಿಷ್ಯ ಆಗಮಿಸಿದ್ದರು. ಬೆಳೆ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಬಂಟ್ವಾಳ ಇವರು ನೀಡಿದ್ದರು.

ವೇದಿಕೆಯಲ್ಲಿ ಹರೀಶ್‌ ಸಿ.ಎಚ್‌, ಸಂಜೀವ ಪೂಜಾರಿ ನಿಡ್ಯ, ನರ್ಸಪ್ಪ ಪೂಜಾರಿ, ರಾಜೇಶ್‌ ವಿಟ್ಲ, ಸಂಜೀವ ಪೂಜಾರಿ ಎಂ.ಎಸ್‌, ಚಂದ್ರಹಾಸ ಕೊಪ್ಪಳ ಉಪಸ್ಥಿತರಿದ್ದರು.

- Advertisement -

Related news

error: Content is protected !!