Wednesday, May 15, 2024
spot_imgspot_img
spot_imgspot_img

ವಿಟ್ಲ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಅಳಕೆಮಜಲು ಸರ್ಕಾರಿ ಕಿ. ಪ್ರಾ. ಶಾಲೆ; 75ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಆಟಿದ ಅಟಿಲ್ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಪೈಕಿ ಅತೀ ಹೆಚ್ಚು ಮಕ್ಕಳನ್ನು ಹೊಂದಿರುವ ಹೆಗ್ಗಳಿಕೆ ಪಾತ್ರವಾದ ಅಳಕೆಮಜಲು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈ ಶಾಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ಆಟಿದ ಅಟಿಲ್ ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಅಳಕೆಮಜಲು ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್‌ ರಹಿಮಾನ್‌ ನೆರವೇರಿಸಿದರು.

ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಧ್ವಜಾರೋಹಣ ನಡೆದ ಬಳಿಕ ಮೆರವಣಿಗೆ ಸಾಗಿತು.ಮೆರವಣಿಗೆ ಬಳಿಕ ಶಾಲೆಯ ಪ್ರವೇಶ ದ್ವಾರದ ಉದ್ಘಾಟನೆ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ಳಿ ಹಬ್ಬ ಸಮಿತಿಯ ಗೌರವ ಸಲಹೆಗಾರ ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ, ಸುಮಂಗಲಾ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್‌ ಕಲ್ಲಡ್ಕ, ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಪದ್ಮನಾಭ ಸಪಲ್ಯ, ಎಸ್‌ಡಿಎಂಸಿ ಅಧ್ಯಕ್ಷೆ ಸುಮಲತಾ, ಸಿಆರ್‌ಪಿ ಅಧಿಕಾರಿ ಜ್ಯೋತಿ, ಶಾಲಾ ಮುಖ್ಯೋಪಾಧ್ಯಯಿನಿ ಬೆನಡಿಕ್ಟ ಆಗ್ನೆಸ್ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಬೆಳ್ಳಿ ಹಬ್ಬ ಸಮಿತಿಯ ಸದಸ್ಯರು, ಶ್ರೀ ಶಾರದಾಂಬ ಭಜನಾ ಮಂಡಳಿಯ ಅಧ್ಯಕ್ಷರು, ಮಹಿಳಾ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಈ ವೇಳೆ ಶಾಲೆಗೆ ಸಹಕಾರಿ ಸಂಘದ ವತಿಯಿಂದ 50 ಫೈಬರ್‌ ಚಯರ್‌ ಮತ್ತು ತಮ್ಮ ವೈಯಕ್ತಿಕ ನೆಲೆಯಿಂದ 10 ವಿಐಪಿ ಚಯರ್‌ಗಳನ್ನು ನೀಡಿದ ಸುಧಾಕರ್ ಶೆಟ್ಟಿ ಬೀಡಿನಮಜಲು ಹಾಗೂ ಶಾಲೆಗೆ ಬ್ಯಾಂಡ್‌ ಸೆಟ್ ನೀಡಿದ ಸುಮಂಗಲಾ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್‌ ಕಲ್ಲಡ್ಕ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಪದ್ಮನಾಭ ಸಪಲ್ಯ ಅವರು ಪ್ರವೇಶ ದ್ವಾರ ನಿರ್ಮಿಸಿಕೊಟ್ಟಿದ್ದಾರೆ. ಶಾಲಾ ಶಿಕ್ಷಕರು ಶಾಲೆಗೆ ಚಯರ್ ಕೊಡುಗೆಯಾಗಿ ನೀಡಿದರು.

ಈ ವೇಳೆ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷತೊಟ್ಟು ಮಿಂಚಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆ್ಯಗ್ನೆಸ್‌ ಮೆಂಡೋನ್ಸಾ ಸ್ವಾಗತಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಸಹ ಶಿಕ್ಷಕಿ ರಾಜೀವಿ.ಕೆ ವಾಚಿಸಿದರು. ಆಟಿದ ಆಟಿಲ್‌ ಬಗ್ಗೆ ಸಹ ಶಿಕ್ಷಕಿ ಜಯಂತಿ ನಾಯ್ಕ ಮಾತಾನಾಡಿದರು. ನೃತ್ಯ ವೈವಿಧ್ಯ ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿ ಅನುರಾಧ.ಡಿ ನೇರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕ ಇಸ್ಮಾಯಿಲ್‌ ನೇರವೇರಿಸಿದರು. ಬಳಿಕ ಆಟಿ ತಿಂಗಳಿನ ವಿಶೇಷ ತಿನಿಸುಗಳನ್ನು ಸವಿದರು.

- Advertisement -

Related news

error: Content is protected !!