- Advertisement -
- Advertisement -

ವಿಟ್ಲ: ರಾತ್ರೋರಾತ್ರಿ ಕಳ್ಳರು ಬ್ಯಾಂಕ್ ದರೋಡೆ ಮಾಡಲು ಯತ್ನಿಸಿ ವಿಫಲವಾದ ಘಟನೆ ನಡೆದಿದೆ.

ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಕೋಡಪದವು ಶಾಖೆಯಲ್ಲಿ ಈ ಘಟನೆ ನಡೆದಿದೆ.

ಸಿ.ಸಿ ಕ್ಯಾಮರಾಕ್ಕೆ ಪ್ಲಾಸ್ಟಿಕ್ ಗೋಣಿಚೀಲ ಮುಚ್ಚಿ ಬಳಿಕ ಶಟರ್ ಅನ್ನು ಗ್ಯಾಸ್ ಕಟ್ಟರ್ ಮೂಲಕ ತುಂಡರಿಸಿ ಒಳನುಗ್ಗಲು ಯತ್ನಿಸಿದ್ದಾರೆ. ಆದರೆ ಕಳ್ಳರ ಯತ್ನ ವಿಫಲಗೊಂಡಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.


- Advertisement -