Saturday, May 18, 2024
spot_imgspot_img
spot_imgspot_img

ವಿಟ್ಲ: ಮಿತ್ತೂರಿನಲ್ಲಿ ನಡೆದ ಕಳ್ಳತನ; ಆರೋಪಿಗೆ ನ್ಯಾಯಾಂಗ ಬಂಧನ – ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ

- Advertisement -G L Acharya panikkar
- Advertisement -

ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಕಳೆದ ಮಾರ್ಚ್‌‌ನಲ್ಲಿ ನಡೆದ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೇರಳದ ಕಣ್ಣೂರಿನ ಕೊಲ್ಲಪರಂಬಿಲ ನಿವಾಸಿ ಮಹಮ್ಮದ್‌ ಕೆ ಯು ಎನ್ನಲಾಗಿದೆ.

ಮಿತ್ತೂರಿನ ಹಂಝ ಮುರ ಉಮ್ಮರ್‌ ಎಂಬವರ ಮನೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮನೆಯ ಹಿಂಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಒಟ್ಟು 107 ಗ್ರಾಂ ನಷ್ಟು ಚಿನ್ನವನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದು ಕಳವಾಗಿದ್ದ ಇದರ ಅಂದಾಜು ಮೌಲ್ಯ 4,28,000/- ರೂಪಾಯಿ ಆಗಬಹುದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ದರು.

ಈತ ಮಾಡಿರೋ ಖತರ್ನಾಕ್ ಕೆಲಸ ಏನೆಲ್ಲಾ ಗೊತ್ತಾ..? ಈ ವರದಿಯನ್ನೂ ಓದಿ: ವಿಟ್ಲ ಪರಿಸರ ಸೇರಿದಂತೆ ಹಲವೆಡೆ ಕಳ್ಳತನ; ಅಂತರ್‌ ರಾಜ್ಯ ಚೋರನ ಹೆಡೆಮುರಿ ಕಟ್ಟಿದ ಪುತ್ತೂರು ಗ್ರಾಮಾಂತರ ಪೊಲೀಸರು..!

ಈ ಮೊದಲೇ ಬಂಧಿತನಾಗಿದ್ದ ಮಹಮ್ಮದ್‌ ಕೆ ಯು ಅವನನ್ನು ವಿಚಾರಿಸಿದಾಗ ಕಳ್ಳತನವಾದ ಸ್ವತ್ತುಗಳನ್ನು ಕಾಸರಗೂಡಿನಲ್ಲಿ ಮಾರಾಟ ಮಾಡಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಅದರಂತೆ ಕಳವು ಮಾಲನ್ನು ಕಾಸರಗೂಡಿನ ಜುವ್ಯೆಲರಿ ಅಂಗಡಿಯಿಂದ ಸುಮಾರು 80.10 ಗ್ರಾಂ ನಷ್ಟು ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಇದರ ಅಂದಾಜು ಮೌಲ್ಯ 3,71,600/-ರೂಪಾಯಿ ಆಗಬಹುದು ಎನ್ನಲಾಗಿದೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಈ ಪ್ರಕರಣವನ್ನು ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ನಾಗರಾಜ್ ಹೆಚ್ ಇ ಇವರ ನೇತೃತ್ವದಲ್ಲಿ ನಡೆದಿದೆ. ಠಾಣಾ ಪಿಎಸ್ ಐ ಸಂದೀಪ್ ಕುಮಾರ್ ಶೆಟ್ಟಿ ಪಿಎಸ್ ಐ (ಕಾಮತ್ತುಸು), ರುಕ್ಮಾ ನಾಯ್ಕ್‌ ಪಿಎಸ್‌ಐ (ತನಿಖೆ-1) ಹಾಗೂ ಸಿಬ್ಬಂದಿಗಳು ಪತ್ತೆಗೆ ಪ್ರಮುಖ ಪಾತ್ರ ವಹಿಸಿರುತ್ತಾರೆ.

- Advertisement -

Related news

error: Content is protected !!