Wednesday, May 15, 2024
spot_imgspot_img
spot_imgspot_img

ವಿಟ್ಲ ಮುಡ್ನೂರು‌ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕರಿಂದ 5ಕೋಟಿ 23 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ದಿಗೊಳ್ಳಲಿರುವ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಐದುಕೋಟಿ ಇಪ್ಪತ್ತಮೂರು ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ದಿಗೊಳ್ಳಲಿರುವ ವಿವಿಧ ಕಾಮಗಾರಿಗಳಿಗೆ ಮಾ.1ರಂದು ಶಾಸಕರಾದ ಸಂಜೀವ ಮಠಂದೂರುರವರು ಶಿಲಾನ್ಯಾಸ ನೆರವೇರಿಸಿದರು.

vtv vitla
vtv vitla

ಬಳಿಕ ಮಾತನಾಡಿದ ಅವರು ಎಲ್ಲಿ ಕೇಸರಿ ಧ್ವಜ ಹಾರಾಡುತ್ತಿದಯೋ ಅಲ್ಲಿ ಸಂಸ್ಕೃತಿ ಇದೆ ಎಂದರ್ಥ. ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ವ್ಯವಸ್ಥೆ ಮೋದೀಜಿಯವರಿಂದ ಆಗುತ್ತಿದೆ. ಗ್ರಾಮೀಣ ಭಾಗದ ಕರಕುಶಲ ಉದ್ಯಮಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ತರಲಾಗಿದೆ. ಕೋವಿಡ್ ನಂತಹ ಸಾಂಕ್ರಾಮಿಕ ರೋಗಬಂದಾಗ 130 ಕೋಟಿ ಜನರ ಆರೋಗ್ಯವನ್ನು ರಕ್ಷಣೆ ಮಾಡಿದ ರೀತಿ ಇಡೀ ಜಗತ್ತೆ ನಮ್ಮತ್ತ ನೋಡುವಂತಾಗಿದೆ. ದೇಶದ ಪ್ರಧಾನಿಯವರ ಕಾಳಜಿ ಜಗತ್ತಿನ ಜನ ಮೆಚ್ಚುಗೆ ಪಡೆಯುವಂತಾಗಿದೆ. ಬ್ರಷ್ಟಾಚಾರರಹಿತ ವ್ಯವಸ್ಥೆ ಇಡೀ ದೇಶದಲ್ಲಿ ಆಗ್ತಿದೆ. ಜನ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇರಿಸುವ ಕೆಲಸವಾಗುತ್ತಿದೆ.

ಸಾಲಮನ್ನ ದಿಂದಾಗಿ ರೈತರ ಬಾಳು ಹಸನಾಗಿದೆ. ಕಡಿಮೆ‌ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುವ ಕೆಲಸವಾಗಿದೆ. ರೈತಪರವಾದ ಸರ್ಕಾರ ಕರ್ನಾಟಕದಲ್ಲಿದೆ. ಕೃಷಿಕರಿಗೆ ಸಹಕಾರಿಯಾಗುವ ಯೋಜನೆ‌ ಇದೀಗ ಜಾರಿಯಲ್ಲಿದೆ.

ಸರ್ಕಾರ ಕೊಟ್ಟದನ್ನು ನಾನು ತಲುಪಿಸುವ ಕೆಲಸ ಮಾಡಿದ್ದೇನೆ. ಇನ್ನೂ ಬೇಡಿಕೆಗಳಿದೆ ಅದನ್ನು ಮುಂದಿನ‌ ದಿನಗಳಲ್ಲಿ ಈಡೇರಿಸುವ ಕೆಲಸ ಮಾಡುತ್ತೇವೆ. ಹಿಂದೂ ಆಚಾರ ವಿಚಾರಗಳಿಗೆ ಸ್ಪಂದನೆ ನೀಡುವ ಕೆಲಸ ಸರಕಾರದಿಂದಾಗುತ್ತಿದೆ. ಅಭಿವೃದ್ದಿಯ ಜೊತೆಗೆ ಸಂಘಟನೆಗೆ ಒತ್ತು ನೀಡಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದರು.

vtv vitla
vtv vitla

ಗ್ರಾ.ಪಂ.ಉಪಾಧ್ಯಕ್ಷೆ ಚಂದ್ರಾವತಿ, ಪುಣಚ ಮಹಾ ಶಕ್ತಿ ಕೇಂದ್ರದ ಅಧ್ಯಕ್ಣ ಹರಿಪ್ರಸಾದ್ ಯಾದವ್, ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರ್, ಪುತ್ತೂರು ಮಂಡಲ ರೈತಮೂರ್ಚದ ಪ್ರಧಾನ ಕಾರ್ಯದರ್ಶಿ ಪುನಿತ್ ಮಾಡ್ತಾರ್, ಮಾಜಿ ಗ್ರಾ.ಪಂ ಅಧ್ಯಕ್ಷ ಪ್ರೇಮಲತಾ, ತೀರ್ಥರಾಮ, ವಿಟ್ಲ ವ್ಯವಸಾಯ ಸೇವಾಸಹಕಾರಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಪ್ರಕಾಶ್ ನಾಯಕ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೀವಿತಾ ಕೊಲ್ಯ ಹಾಗೂ ಅರ್ಷಿತಾ ಕುಂಡಡ್ಕ ಪಾದೆ ಪ್ರಾರ್ಥಿಸಿದರು. ವಿಟ್ಲ ಮುಡ್ನೂರು ಶಕ್ತಿಕೇಂದ್ರದ ಸಂಚಾಲಕರಾದ ಗೋವಿಂದ ರಾಜ್ ಪೆರುವಾಜೆ ಸ್ವಾಗತಿಸಿದರು. ಗ್ರಾ.ಪಂ ಸದಸ್ಯ ಮಹಾಬಲೇಶ್ವರ ಭಟ್ ವಂದಿಸಿದರು.

ವಿವಿಧ ಕಾಮಗಾರಿಗಳಿಗೆ ಶಿಲನ್ಯಾಸ:

ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಅಗಸರಪಾಲು ಪಿಲಿಂಜ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಅಭಿವೃದ್ಧಿ, ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ದಡ್ಡಲಡ್ಕ ಕುಟ್ಟಿಗುಡ್ಡೆ ಆಲಂಗಾರು ಪರಿಶಿಷ್ಟ ಪಂಗಡ ಕಾಲನಿ ರಸ್ತೆ, ಇಪ್ಪತ್ತೆಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ಮರುವಾಳ ಕುಂಡಡ್ಕ ನಾಟೆಕಲು ಪರಿಯಾಲಡ ರಸ್ತೆ, ಒಂದು ಲಕ್ಷರೂಪಾಯಿ ವೆಚ್ಚದಲ್ಲಿ ಸರೋಳಿಮೂಲೆ ಎಂಬಲ್ಲಿ ಕೊಳವೆಬಾವಿ, ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಪಿಲಿಂಜ ದರ್ಭ ಪರಿಶಿಷ್ಟ ಜಾತಿ ಕಾಲನಿ ರಸ್ತೆ, ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಗುಂಪಲಡ್ಕ ಪಲ್ಲದಗುರಿ ಪರಿಶಿಷ್ಟ ಪಂಗಡ ಕಾಲನಿ ರಸ್ತೆ, ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಬೇರಿಕೆ ಸೆನೆರಮಜಲು ರಸ್ತೆ ಕಾಂಕ್ರಿಟೀಕರಣ, ಹತ್ತು ಲಕ್ಷ ರೂಪಾಯಿ ವೆಚ್ಚದಳಿ ಕುರುಂಬಳ ಕೇಪುಳಗುಡ್ಡೆ ಉಜಿರೆಮಾರು ರಸ್ತೆ ಕಾಂಕ್ರಿಟೀಕರಣ, ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಾಟೆಕಲ್ಲು ಕಬ್ಬಿನಹಿತ್ತು ರಸ್ತೆ ಕಾಂಕ್ರಿಟೀಕರಣ, ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಕಮನಾಜೆ ಶಾಂತಿಯಡ್ಕ ಬಲ್ನಾಡು ರಸ್ತೆ ಡಾಮರೀಕರಣ, ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡತ್ತಡ್ಕ ಮಲರಾಯಿ ದೈವಸ್ಥಾನ ರಸ್ತೆ, , ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಬೇರಿಕೆ ಪರ್ವಾಜೆ ರಸ್ತೆ ಅಭಿವೃದ್ಧಿ, ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಕಂಬಳಬೆಟ್ಟು ಹಿ.ಪ್ರಾ ಶಾಲಾ ಕೊಠಡಿ ದುರಸ್ತಿ, ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಡುಮನೆ ಪಿಲಿಂಜ ಪ.ಪಂಗಡ ಕಾಲನಿ ರಸ್ತೆ, ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ಬೇರಿಕೆ ಪಿಲಿಂಜದಿಂದ ಸ.ಹಿ.ಪ್ರಾ. ಶಾಲೆ ಕುಶಾಲನಗರಕ್ಕೆ‌ ಸಂಪರ್ಕಿಸಲು ತೋಡಬದಿ ಎಂಬಲ್ಲಿ ಕಾಲುಸಂಕ ನಿರ್ಮಾಣ, ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ಕಲುವಾಜೆ ಕಟ್ಟಿತ್ತಿಲ ಮಾಡಡ್ಕ ಅಜ್ಜಿನಡ್ಕದಿಂದ ಸ.ಹಿ.ಪ್ರಾ.ಶಾಲೆ ಕುಶಾಲನಗರಕ್ಕೆ ಸಂಪರ್ಕಿಸಲು ಕಲುವಾಜೆ ಎಂಬಲ್ಲಿ ಕಾಲುಸಂಕ ನಿರ್ಮಾಣ, ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ಕಲುವಾಜೆ ಕಟ್ಟತ್ತಿಲ ಮಾಡಡ್ಕ ಅಜ್ಜಿನಡ್ಕದಿಂದ ಸ.ಹಿ.ಪ್ರಾ. ಶಾಲೆ ಕುಶಾಲನಗರಕ್ಕೆ ಸಂಪರ್ಕಿಸಲು ಕಟ್ಟತ್ತಿಲ ಎಂಬಲ್ಲಿ ಕಾಲುಸಂಕ ನಿರ್ಮಾಣ, ಹತ್ತು‌ ಲಕ್ಷ ರೂಪಾಯಿ ವೆಚ್ಚದಲ್ಲಿ ಹಲಸಿನಕಟ್ಟೆ ಪಳ್ಳತಾರು ನಡುಮನೆ ಸಂಪರ್ಕ ರಸ್ತೆ ಕಾಂಕಿಟೀಕರಣ, ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಮಾನಾಜೆಮೂಲ ಕುಶಾಲನಗರ ಸಂಪರ್ಕ ರಸ್ತೆ ಕಾಂಕ್ರಿಟೀಕರಣ, ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಮರುವಾಳ ನೀರಕೋಡಿ ಪಾಂಡೇಲು ಸಂಪರ್ಕ ರಸ್ತೆ ಕಾಂಕ್ರಿಟೀಕರಣ, ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡತ್ತಡ್ಕ ಪೈಸಾರಿ ರಸ್ತೆ ಕಾಂಕ್ರಿಟೀಕರಣ, ಇಪ್ಪತೈದು ಲಕ್ಷ ರೂಪಾಯಿ ವೆಚ್ಚದಲ್ಲಿ ನಾಟೆಕಲ್ಲು ಪಿಲಿಂಜ ಅಗಸರಪಾಲು ಬೇರಿಕೆ ಪ.ಪಂಗಡ ಕಾಲನಿ ಸಂಪರ್ಕ, ಇಪ್ಪತೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಚಪ್ಪುಡಿಯಡ್ಕ ಕಟ್ಟತ್ತಿಲ ಕುಶಾಲನಗರ ಮಾನಾಜೆಮೂಲೆ ಪ.ಪಂಗಡ ಕಾಲನಿ ಸಂಪರ್ಕ ರಸ್ತೆ, ಇಪ್ಪತೈದು ರೂಪಾಯಿ ವೆಚ್ಚದಲ್ಲಿ ನಾಟೆಕಲ್ಲು ಕಬ್ಬಿನಹಿತ್ತು ಪ.ಪಂಗಡ ಕಾಲನಿ ರಸ್ತೆ, ಇಪ್ಪತೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಪರ್ವಾಜೆ ಅನುವುದಡ್ಕ ಪ.ಪಂಗಡ ಕಾಲನಿ ರಸ್ತೆ, ಇಪ್ಪತೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಗುಂಪಲಡ್ಕ ಸರೋಳಿಮೂಲೆ ಪ.ಪಂಗಡ ಕಾಲನಿ ರಸ್ತೆ, ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಹಡೀಲು ಪ.ಪಂಗಡ ಕಾಲನಿ ನಾಟೆಕಲು ರಸ್ತೆ ಅಭಿವೃದ್ಧಿ, ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಮಾನಾಜೆಮೂಲೆ ಕೊಲ್ಯ ಹೊಯಿಗೆ ಪ.ಪಂಗಡ ಕಾಲನಿ ರಸ್ತೆ, ಒಂದು ಕೋಟಿ ರೂಪಾಯಿ ಮೌಲ್ಯದ ಅಗಸರಪಾಲು ಎಂಬಲ್ಲಿ ಸೇತುವೆ ಸಮೇತ ಕಿಂಡಿ ಅಣೆಕಟ್ಟು, ಒಂದುಕೋಟಿ ರೂಪಾಯಿ ವೆಚ್ಚದಲ್ಲಿ ಪೆರುವಾಜೆ ಎಂಬಲ್ಲಿ ಸೇತುವೆ ಸಮೇತ ಕಿಂಡಿ ಅಣೆಕಟ್ಟು, ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ದಡ್ಕಲಡ್ಕ ಕುತ್ತಿಗುಡ್ಡೆ ರಸ್ತೆ ಡಾಮರೀಕರಣ,‌ ಐವತ್ತು‌ಸಾವಿರ ರೂಪಾಯಿ ವೆಚ್ಚದಲ್ಲಿ ಕೇಪುಳುಗುಡ್ಡೆ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ದುರಸ್ಥಿ.

- Advertisement -

Related news

error: Content is protected !!