Friday, July 11, 2025
spot_imgspot_img
spot_imgspot_img

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಭಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರು ಮತ್ತು ಸ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಪರಮಾಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವ ದತ್ತ ಸಂಸ್ಥಾನ್ ಒಡಿಯೂರು ಹಾಗೂ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀ ಧಾಮ ಮಾಣಿಲ ಇವರ ದಿವ್ಯ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ ಮಾಣಿಲ ಶ್ರೀಗಳು ಹಾಗೂ ಡಿಯೂರು ಶ್ರೀಗಳು ಈ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವಚನ ನೀಡಿದರು.

ಸಭಾಕಾರ್ಯಕ್ರಮದ ಅಧ್ಯಕ್ಷರಾಗಿ ಕೃಷ್ಣಯ್ಯ ಕೆ ಅರಮನೆ ವಿಟ್ಲ, ಹಾಗೂ ಮುಖ್ಯ ಅತಿಥಿಗಳಾಗಿ ಗಣೇಶ್ ಆಳ್ವ, ಸುಬ್ರಾಯ ಪೈ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ವಿಟ್ಲ, ರಾಮ್ ದಾಸ್ ಶೆಣೈ, ಜಯಂತ ಸಿ ಎಚ್, ಶೀನ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ರಾಜೇಶ್ ವಿಟ್ಲ, ಸ್ಮಾರ್ಟ್ ಸಿಟಿ ಇದರ ಪಾಲುದಾರ ಜೀತು ಜೈನ್ ಇವರುಗಳು ಮಾತನಾಡಿ ಈ ಬ್ರಹ್ಮಕಲಶೋತ್ಸವದ ಸುಸಂಧರ್ಭಕ್ಕೆ ಶುಭಹಾರೈಸಿದ್ರು. ಹಾಗೂ ಪದ್ಮನಾಭ ಗೌಡ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರ್. ಕೆ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.ರಾಜೇಶ್ ವಿಟ್ಲ ಧನ್ಯವಾದಗೈದರು.

- Advertisement -

Related news

error: Content is protected !!